ಗಾಝಿಪುರ ಗಡಿಯಲ್ಲಿ ಹೆದ್ದಾರಿಗೆ ಅಳವಡಿಸಿದ್ದ ಮೊಳೆ ತೆರವುಗೊಳಿಸಿದ ಪೊಲೀಸರು

Prasthutha|

ನವದೆಹಲಿ : ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತಡೆಯಲು ಬಿಜೆಪಿ ಸರಕಾರ ರಸ್ತೆಗೆ ಅಳವಡಿಸಿದ್ದ ತಡೆಬೇಲಿಯ ನಡುವೆ, ಮೊಳೆಗಳನ್ನು ತೆರವುಗೊಳಿಸಲಾಗುತ್ತಿದೆ. ವ್ಯಾಪಕ ಟೀಕೆಯ ಬಳಿಕ, ಗಾಝಿಪುರ ಗಡಿಯಲ್ಲಿ ರಸ್ತೆಗೆ ಅಳವಡಿಸಲಾಗಿದ್ದ ಮೊಳೆಗಳನ್ನು ತೆರವುಗೊಳಿಸಲಾಗುತ್ತಿದೆ.

- Advertisement -

ಈ ಕುರಿತ ವೀಡಿಯೊವೊಂದನ್ನು ಎಎನ್ ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರದ ಬಳಿಕವೂ, ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ರೈತರನ್ನು ತಡೆಯಲು ಹೆದ್ದಾರಿಯಲ್ಲಿ ಭದ್ರವಾದ ತಡೆಬೇಲಿಯನ್ನು ಅಳವಡಿಸಿತ್ತು.

ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಅದರ ನಡುವೆ ಕಾಂಕ್ರೀಟ್ ಸ್ಲ್ಯಾಬ್, ಮುಳ್ಳು ತಂತಿ ಬೇಲಿ ಹಾಕಲಾಗಿತ್ತು. ಇವುಗಳ ನಡುವೆ ರಸ್ತೆಗೆ ಮೊಳೆಗಳನ್ನೂ ಅಳವಡಿಸಲಾಗಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

- Advertisement -



Join Whatsapp