ಅಡಿಕೆ ಮತ್ತು ರಬ್ಬರ್ ಬೆಳೆಗೆ ಪರ್ಯಾಯವಾಗಿ ವಿದೇಶಿ ರಂಬೂಟನ್ ಬೆಳೆದು ಸಾಧನೆಗೈದ ಪುತ್ತೂರಿನ ರೈತರು

Prasthutha|

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ರೈತರು ಅಡಿಕೆ ಬೆಳೆಯನ್ನು ನಂಬಿ ಬದುಕ್ತಿದ್ದಾರೆ. ಜೊತೆಗೆ ರಬ್ಬರ್ ಕೃಷಿ ಕೂಡಾ ಮಾಡ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಅಡಿಕೆ ಬೆಳೆ ಬಗ್ಗೆ ಅಪಸ್ವರ ಎಬ್ಬಿಸಿದಾಗ ಅಡಿಕೆಗೆ ಭವಿಷ್ಯ ಇಲ್ಲ ಎಂಬ ಚರ್ಚೆ ಈ ಹಿಂದೆ ಬಹಳಷ್ಟು ಭಾರೀ ಆಗಿತ್ತು. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೃಷ್ಣ ಶೆಟ್ಟಿ ನೇತೃತ್ವದ ತಂಡವೊಂದು ಕರಾವಳಿಯಲ್ಲಿ ಅಡಿಕೆ, ರಬ್ಬರ್ ಗೆ ಪರ್ಯಾಯ ಬೆಳೆ ಯಾವುದು ಎಂದು ಅಧ್ಯಯನ ಮಾಡಿತು. ಇದೇ ವೇಳೆ ಇಲ್ಲಿನ ವಾತಾವರಣಕ್ಕೆ ಯಾವುದು ಸೂಕ್ತ ಬೆಳೆ ಎಂಬುದನ್ನು ಅಧ್ಯಯನ ಮಾಡಿದಾಗ ಇವರ ತಂಡವು ರಂಬೂಟನ್ ಬೆಳೆ ಸೂಕ್ತ ಎಂಬುದನ್ನು ಮನಗಂಡಿತು.‌

- Advertisement -

ಇದೀಗ ಕಳೆದ ಎರಡು ವರ್ಷಗಳ ಹಿಂದೆ ಇವರು ರಂಬೂಟನ್ ಎಂಬ ವಿದೇಶಿ ಹಣ್ಣಿನ ಬೆಳೆಯ ಕೃಷಿ‌ ಮಾಡಿ ಪರ್ಯಾಯ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಇವರು ಕೃಷಿ ಆರಂಭಿಸಿ ಎರಡು ವರ್ಷಗಳಾಗಿದ್ದು ಈ ತಂಡದ ಎಲ್ಲರಿಗೂ ಉತ್ತಮ ಫಲಿತಾಂಶ ಸಿಕ್ಕಿದೆ. ಅಡಿಕೆಗೆ ನಾಲ್ಕು ವರ್ಷದಲ್ಲಿ ಸಿಗೋ ಬೆಳೆ ಇವರಿಗೆ ಒಂದೇ ವರ್ಷದಲ್ಲಿ ಸಿಗ್ತಿದೆ. ಈ‌ ಕುರಿತು ಮಾತನಾಡಿರುವ ಕೃಷಿಕ ಕೃಷ್ಣ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಅಡಿಕೆ ಬೆಳೆದಾಗ ಧಾರಣೆ ಕುಸಿದಾಗ ತಕ್ಷಣ ರಬ್ಬರ್ ಕೃಷಿ ಮಾಡಲು ಮುಂದಾಗ್ತಿದ್ರು. ಇದಕ್ಕೆ ಧಾರಣೆ ಕುಸಿದಾಗ ಮತ್ತೆ ಅಡಿಕೆ ಬೆಳೆ ಬೆಳೆಯಲು ಮುಂದಾಗ್ತಿದ್ರು.‌ಈ ಮಾನಸಿಕತೆಯಿಂದ ಅವರು ಹೊರಬರಬೇಕಾಗಿದೆ. ಇದೀಗ ನಾವು ಮಾಡಿರೋ‌ ಹೊಸ ಪ್ರಯತ್ನದ ಕೃಷಿಯಲ್ಲಿ ಯಶಸ್ಸು ಕಂಡಿದ್ದು ರೈತರು ಈ ಬೆಳೆಯನ್ನು ಬೆಳೆಯುವ ಬಗ್ಗೆ ಮನಸ್ಸು ಮಾಡಬೇಕಾಗಿದೆ ಅಂದರು.



Join Whatsapp