►ಎಂಎಸ್’ಪಿಗೆ ಕಾನೂನು ಖಾತರಿ ಒತ್ತಡದ ಭರವಸೆ
ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ರೈತರ ನಿಯೋಗ ಮಾತುಕತೆ ನಡೆಸಿದೆ.
ಈ ವೇಳೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತ್ರಿ ನೀಡಬೇಕು ಎಂಬ ರೈತರ ಪ್ರಮುಖ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ‘ಇಂಡಿಯಾ’ ಮೈತ್ರಿಕೂಟವು ಒತ್ತಡವನ್ನು ಹೇರಲಿದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಕರ್ನಾಟಕ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ 12 ಮುಖಂಡರನ್ನು ಒಳಗೊಂಡ ರೈತರ ನಿಯೋಗವು ಸಂಸತ್ ಸಂಕೀರ್ಣದಲ್ಲಿ ರಾಹುಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.