ರೈತರ ಆಕ್ರೋಶದಿಂದಲೇ ಬಿಜೆಪಿಯ ನಾಶ ನಿಶ್ಚಿತ: ಕಾಂಗ್ರೆಸ್

Prasthutha|

ಬೆಂಗಳೂರು: ಮಳೆಯಿಂದಾದ ಹಾನಿಯ ನಡುವೆಯೂ ಸಿಕ್ಕ ಅಲ್ಪ ಸ್ವಲ್ಪ ಬೆಳೆಗೂ ಬೆಲೆ ಕುಸಿತದ ಆಘಾತ. ಹೆಸರು ಕಾಳು ರೈತರು ನೂರೆಂಟು ಸವಾಲು ಎದುರಿಸುತ್ತಿದ್ದಾರೆ, ಹೆಸರು ಕಾಳಿಗೆ 7755 ರೂ.ಬೆಂಬಲ ಬೆಲೆ ಇದ್ದರೂ 5000 ರೂ.ಗೆ ಕುಸಿದಿದ್ದೇಕೆ? ಬೆಂಬಲ ಬೆಲೆ ತಲುಪದಿರುವುದೇಕೆ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿರುವ ಅವರು, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ, ತಾವು ಸಿನೆಮಾ ಬಿಟ್ಟು ನೊಂದ ರೈತರ ಕಡೆ ನೋಡುವುದು ಯಾವಾಗ?. ಮಳೆ ಹಾನಿ ಸಮೀಕ್ಷೆಯು ಕಾಟಾಚಾರದ ಅಂಕಿ-ಅಂಶದಿಂದ ಕೂಡಿದೆ, ವಾಸ್ತವದಲ್ಲಿ ಇದರ ನಾಲ್ಕು ಪಟ್ಟು ಹೆಚ್ಚು ಹಾನಿಯಾಗಿದೆ ಎಂದರು.

ಕುರ್ಚಿ ಕಸರತ್ತಿಗೆ ದೆಹಲಿಗೆ ಓಡುವ ಸಿಎಂ, ಪರಿಹಾರ ಕೇಳಲು ಹೋಗುವುದಿಲ್ಲವೇಕೆ? ಸಿನಮಾಗೆ ಹೋಗುವ ಬಿ.ಸಿ.ಪಾಟೀಲ್ ಅವರು ರೈತರ ನೋಡಲು ಹೋಗದಿರುವುದೇಕೆ?. ಬೇಜವಾಬ್ದಾರಿ ಬಿಜೆಪಿಯಿಂದ ರೈತರಿಗೆ ‘ಹಗ್ಗಭಾಗ್ಯ’ ಸಿಗುತ್ತಿದೆ. ವಿದ್ಯುತ್ ಖಾಸಗೀಕರಣ, ಕೃಷಿ ಉತ್ಪನ್ನಗಳು, ಉಪಕರಣಗಳ ಮೇಲೆ GST ಹೊರೆ, ನಿಗದಿಯಾಗದ ಕನಿಷ್ಠ ಬೆಂಬಲ ಬೆಲೆ.

- Advertisement -

ರೈತರನ್ನು ಸರ್ವನಾಶ ಮಾಡಲು ಕೃಷಿ ಕಾಯ್ದೆಗಳ ಬದಲು ಇತರ ಮಾರ್ಗಗಳನ್ನು ಹುಡುಕಿದೆ ಬಿಜೆಪಿ ಸರ್ಕಾರ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದವರು ರೈತರ ಕಷ್ಟಗಳನ್ನ ಡಬಲ್ ಮಾಡುತ್ತಿದ್ದಾರೆ. ರೈತರ ಆಕ್ರೋಶದಿಂದಲೇ ಬಿಜೆಪಿಯ ನಾಶ ನಿಶ್ಚಿತ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Join Whatsapp