ಚಾಮರಾಜನಗರ: ಕೋತಿಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಲು ರೈತ ಮಂಜು ಎಂಬುವವರು ಸಾಕು ನಾಯಿಗೆ ಹುಲಿ ವೇಷ ಹಾಕಿದ ಘಟನೆ ಚಾಮರಾಜನಗರದ ಅಜ್ಜೀಪುರದಲ್ಲಿ ನಡೆದಿದೆ.
ಹುಲಿಯ ವೇಷ ಧರಿಸಿರುವ ನಾಯಿಯ ಚಿತ್ರ ಹಾಗೂ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಲ್ಲೂಕಿನ ಅಜ್ಜೀಪುರದ ಹೊರವಲಯದಲ್ಲಿರುವ ತೋಟಗಳಿಗೆ ಕೋತಿಗಳ ಉಪಟಳ ವಿಪರೀತವಾಗಿದ್ದು, ಅವುಗಳನ್ನು ಕಾಯುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಕೋತಿಗಳನ್ನು ಓಡಿಸಲು ಮಂಜು ಈ ಉಪಾಯವನ್ನು ಕಂಡು ಹಿಡಿದಿದ್ದಾರೆ.