ಸಿಮೆಂಟ್ ಕಂಪನಿ ವಿರುದ್ಧ 172 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದ ರೈತ ಸ್ಥಳದಲ್ಲೇ ಮೃತ್ಯು

Prasthutha|

ಕಲಬುರಗಿ: ಸಿಮೆಂಟ್ ಕಂಪನಿ ವಿರುದ್ಧ ನಿರಂತರವಾಗಿ ಧರಣಿ ನಡೆಸುತ್ತಿದ್ದ ರೈತ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ-ಬೆನಕಹಳ್ಳಿ ಗ್ರಾಮದಲ್ಲಿ ನಡೆದಿದೆ. ದೇವಿಂದ್ರಪ್ಪ ಮೃತ ರೈತ.

- Advertisement -

ಕೊಡ್ಲಾ-ಬೆನಕಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಸಿಮೆಂಟ್ ಕಂಪನಿಗೆ ಜಮೀನು ಮಾರಾಟ ಮಾಡಿದ್ದ ದೇವಿಂದ್ರಪ್ಪ ಹಾಗೂ ನೂರಾರು ರೈತರು ಕಳೆದ 172 ದಿನಗಳಿಂದ ಸಿಮೆಂಟ್ ಫ್ಯಾಕ್ಟರಿ ಮುಂದೆ ನಿರಂತರ ಧರಣಿ ನಡೆಸುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ರೈತ ದೇವಿಂದ್ರಪ್ಪ (50) ಧರಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶ್ರೀ ಸಿಮೆಂಟ್ ಫ್ಯಾಕ್ಟರಿಗೆ ಮೃತ ದೇವಿಂದ್ರಪ್ಪ 2.20 ಎಕರೆ ಜಮೀನನ್ನು ನೀಡಿದ್ದರು. ಫ್ಯಾಕ್ಟರಿಗೆ ಭೂಮಿ ನೀಡಿರುವ ರೈತರಿಗೆ ಉದ್ಯೋಗ ಮತ್ತು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು.



Join Whatsapp