ಬಂಟ್ವಾಳ: ಇಬಾ ಎಕ್ಸ್ಪೋ ಆಯೋಜಿಸಿದ ಒಂದು ತಿಂಗಳ ಪುದು ಉತ್ಸವಕ್ಕೆ ಇಂದು ಅದ್ದೂರಿ ಚಾಲನೆ ದೊರೆಯಿತು.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಫರಂಗಿಪೇಟೆ, ಹತ್ತನೇ ಮೈಲು ಕಲ್ಲು ಸೋಮಯಾಜಿ ಮೈದಾನದಲ್ಲಿ ಪುದು ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.
ಪುದು ಉತ್ಸವ ಪ್ರತಿದಿನ ಸಂಜೆ 5ಗಂಟೆಯಿಂದ ನಡೆಯಲಿದ್ದು, ನಾಗರಿಕರು ಸಹಕಾರ ನೀಡುವಂತೆ ಆಯೋಜಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಬಾನು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಇಶಾಮ್ ಫರಂಗಿಪೇಟೆ, ಸದಸ್ಯ ಹಾಶೀರ್ ಪೇರಿಮಾರ್, ಅಸ್ಮಾ ಹತ್ತನೆ ಮೈಲುಕಲ್ಲು, ಅತೀ ಕುಂಜತ್ಕಲ್, ದಾವೂದ್ ಸುಜೀರ್ ಉಪಸ್ಥಿತರಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ ರಮ್ಲಾನ್ ಮಾರಿಪಳ್ಳ, ಮೊಟ್ಟ ಮೊದಲ ಬಾರಿಗೆ ಫರಂಗಿಪೇಟೆಯಲ್ಲಿ ಪುದು ಉತ್ಸವ ನಡೆಯುತ್ತಿದ್ದು, ಎಲ್ಲಾ ನಾಗರಿಕರು ಪಾಲ್ಗೊಂಡು ಸಹಕಾರ ನೀಡಬೇಕು. ಸಂಭ್ರಮಯುತವಾಗಿ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಿದರು.