ಪಂದ್ಯದ ಮಧ್ಯೆ ಮೈದಾನಕ್ಕೆ ನುಗ್ಗಿ ರೋಹಿತ್ ಗೆ ತಲೆಬಾಗಿ ನಮಸ್ಕರಿಸಿದ ಅಭಿಮಾನಿ!

Prasthutha|

ರಾಂಚಿ: ಶುಕ್ರವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯದ ವೇಳೆ  ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರ ಬಳಿ ಅಭಿಮಾನಿಯೊಬ್ಬ ಬಂದು ತಲೆಬಾಗಿ ನಮಸ್ಕರಿಸಿದ್ದಾನೆ. ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್​ ವೇಳೆ ರೋಹಿತ್ ಶರ್ಮಾರ ಅಭಿಮಾನಿಯೊರ್ವ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿ ಮಿಡ್ ಆನ್​​​​​​​​​​​​​​​​ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಬಳಿ ಅಭಿಮಾನಿ ತೆರಳಿದ್ದಾನೆ.

- Advertisement -

ಅಭಿಮಾನಿಯನ್ನು ಕಂಡ ರೋಹಿತ್ ಶರ್ಮಾ ಆತನನ್ನು ದೂರದಲ್ಲೇ ಇರಲು ಸೂಚಿಸಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಅಭಿಮಾನಿ ರೋಹಿತ್ ಸಮೀಪದಲ್ಲೇ ತಲೆಬಾಗಿ ನಮಸ್ಕರಿಸಿದ್ದಾನೆ. ಅಲ್ಲದೇ ಈ ದೃಶ್ಯ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದ್ದು ನೆಟ್ಟಿಗರು ಪಿಕ್ಚರ್ ಆಫ್ ದಿ ಡೇ ಎಂದು ಬಣ್ಣಿಸಿದ್ದಾರೆ.

ಭದ್ರತಾ ಪಡೆಗಳನ್ನು ಕಣ್ತಪ್ಪಿಸಿ ಮೈದಾನಕ್ಕೆ ಪ್ರವೇಶಿಸಿದ್ದ ಅಭಿಮಾನಿಯನ್ನು ಕೂಡಲೇ ಮೈದಾನ ಸಿಬ್ಬಂದಿಗಳು ಕಾರ್ಯಪ್ರವೃತ್ತಗೊಂಡು ಅಭಿಮಾನಿಯನ್ನು ಹೊರಗೆ ಎಳೆದೊಯ್ದಿದ್ದಾರೆ. ರಾಂಚಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್​​ಗಳ ಗೆಲುವನ್ನು ಕಂಡಿದೆ.



Join Whatsapp