ಪ್ರಸಿದ್ಧ ಟರ್ಕಿಶ್ ಚೆಫ್ ಸಿಝಡ್ಎನ್ ಬುರಾಕ್’ಗೆ ಬ್ರೈನ್ ಟ್ಯೂಮರ್ ? ವೈರಲ್ ಸುದ್ದಿಗೆ ‘ಸ್ಮೈಲಿ ಬೇ’ ಹೇಳಿದ್ದೇನು ?

Prasthutha|

ತರ್ಕಿ: ಸಿಝಡ್ಎನ್ ಬುರಾಕ್ ಎಂದೇ ಕರೆಯಲ್ಪಡುವ ಪ್ರಸಿದ್ಧ ಟರ್ಕಿಶ್ ಚೆಫ್(ಬಾಣಸಿಗ) ಬುರಾಕ್ ಓಜ್ಡೆಮಿರ್’ಗೆ ಬ್ರೈನ್ ಟ್ಯೂಮರ್ ಆಗಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ವೈರಲ್ ಸುದ್ದಿ ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ. ಬುರಾಕ್ ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಯ ಬೆಡ್’ನಲ್ಲಿ ಕುಳಿತಿದ್ದ ಫೋಟೋವನ್ನು ಸೋಷಿಯಲ್ಲ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೇ ಪೋಟೋವನ್ನು ಬಳಸಿ ಇದೀಗ ಬುರಾಕ್’ಗೆ ಬ್ರೈನ್ ಟ್ಯೂಮರ್ ಆಗಿದೆ ಎಂದು ವೈರಲ್ ಮಾಡಲಾಗಿದೆ.

- Advertisement -
czn burak in hospital

ತನ್ನ ಕುರಿತು ವ್ಯಾಪಕವಾಗಿ ವೈರಲ್ ಆದ ಬ್ರೈನ್ ಟ್ಯೂಮರ್ ಕುರಿತಾದ ಸುದ್ದಿಗೆ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಸ್ವತ: ಸ್ಪಷ್ಟನೆ ನೀಡಿರುವ ಬುರಾಕ್, ನಮಸ್ಕಾರ ಪ್ರತಿಯೊಬ್ಬರೂ ನಿಮ್ಮ ಶುಭ ಹಾರೈಕೆಗಳಿಗಾಗಿ ನಿಮಗೆ ತುಂಬಾ ಧನ್ಯವಾದಗಳು ಯಾವುದೇ ಕೆಟ್ಟ ಪರಿಸ್ಥಿತಿಯೂ ನನಗಿಲ್ಲ, ದಯವಿಟ್ಟು ಆಧಾರರಹಿತ ಸುದ್ದಿ ಮತ್ತು ಪೋಸ್ಟ್ ಗಳಿಗೆ ಗಮನ ನೀಡಬೇಡಿ, ಧನ್ಯವಾದಗಳು ನಿಮ್ಮನ್ನು ಹೊಂದಲು ನನಗೆ ಸಂತೋಷವಾಗಿದೆ ಎಂದು ಬರೆದಿದ್ದಾರೆ.

ಬುರಾಕ್ ಅನಾರೋಗ್ಯ ಮತ್ತು ಹಠಾತ್ ಆಗಿ ತೂಕ ಇಳಿಕೆಗೊಂಡ ಪರಿಣಾಮ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ. ಬುರಾಕ್ ಸಾಮಾಜಿಕ ಜಾಲತಾಣದಲ್ಲಿ ಸದಾ ನಗುತ್ತಲೇ ಅಡುಗೆ ಮಾಡಿ ಪ್ರಸಿದ್ದಿ ಹೊಂದಿದ್ದಾರೆ. ಸ್ಮೈಲಿ ಬೇ ಎಂದೂ ಕರೆಯಲ್ಪಡುವ ಬುರಾಕ್, ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ.

CZN Burak sosyal medyada takipçi sayısı ile rekora koşuyor - Magazin  Haberleri
Join Whatsapp