ಕುದುರೆ ಸವಾರಿ ಮಾಡುವಾಗ ಕುಸಿದು ಬಿದ್ದು ಖ್ಯಾತ ಮಾಡೆಲ್ ಮೃತ್ಯು

Prasthutha|

ಕುದುರೆ ಓಡಿಸುವಾಗ ಕುಸಿದು ಬಿದ್ದು ಆಸ್ಟ್ರೇಲಿಯಾದ ಖ್ಯಾತ ಮಾಡಲ್ ಸಿಯನ್ನಾ ವಿಯರ್ ಮೃತಪಟ್ಟಿದ್ದಾರೆ.

- Advertisement -


ಏಪ್ರಿಲ್ 2 ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ಹಾರ್ಸ್ ರೈಡ್ ನಲ್ಲಿ ಸಿಯನ್ನಾ ಪಾಲ್ಗೊಂಡಿದ್ದರು. ಕುದುರೆ ಸವಾರಿ ಮಾಡುವಾಗ ಕುದುರೆ ಕುಸಿದು ಬಿದ್ದಿದೆ. ಆ ಅವಘದಲ್ಲಿ ನೆಲಕ್ಕೆ ಬಿದ್ದ ಸಿಯನ್ನಾ ತಲೆಗೆ ತೀವ್ರ ಪೆಟ್ಟುಬಿದ್ದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.


ಒಂದು ತಿಂಗಳು ಕಳೆದರೂ ಸಿಯನ್ನಾ ವಿಯರ್ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳದೇ ಇರುವ ಕಾರಣಕ್ಕಾಗಿ ಕುಟುಂಬದ ಅನುಮತಿಯೊಂದಿಗೆ ಮೇ 4ರಂದು ಲೈಫ್ ಸಪೋರ್ಟ್ ತೆಗೆಯಲಾಗಿದೆ. ಈ ಮೂಲಕ ಸಿಯನ್ನಾ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.



Join Whatsapp