ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ ನಿಧನ

Prasthutha|

ಮುಂಬೈ: ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ (83) ಅವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

- Advertisement -

ಕರುಳಿನ ಕ್ಯಾನ್ಸರ್ ಗೆ  ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಭೂಪಿಂದರ್ ಸಿಂಗ್ ಅವರಿಗೆ  ಕೋವಿಡ್ ಸೋಂಕು ಕೂಡ ತಗುಲಿತ್ತು. ಚಕಿತ್ಸೆ ಫಲಕಾರಿಯಾಗದೇ ಸೋಮವಾರರಾತ್ರಿ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಮೃತಸರದಲ್ಲಿ ಜನಿಸಿದ  ಭೂಪಿಂದರ್ ಸಿಂಗ್, ತಮ್ಮ ವೃತ್ತಿ ಜೀವನವನ್ನು ಆಲ್ ಇಂಡಿಯಾ ರೇಡಿಯೋ ಮೂಲಕ ಪ್ರಾರಂಭಿಸಿದರು. ಬಾಲಿವುಡ್ ನ ಹಲವಾರು ಚಿತ್ರಗಳಿಗೆ ಧ್ವನಿಯಾಗಿದ್ದ ಭೂಪಿಂದರ್ ಸಿಂಗ್ ಅವರು ಮುಂಬೈನಲ್ಲಿ ವಾಸವಿದ್ದರು.

- Advertisement -

ಭೂಪಿಂದರ್ ನಿಧನಕ್ಕೆ   ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ  ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Join Whatsapp