ಮುಸ್ಲಿಮ್ ಯುವಕ – ಯುವತಿಯ ಪ್ರೇಮ ಕಲಹಕ್ಕೆ ಕೋಮುಬಣ್ಣ ನೀಡಿದ ಬಿಜೆಪಿ

Prasthutha|

ಕೋಲ್ಕತ್ತಾ: ಪ್ರೇಮ ನಿರಾಕರಣೆಯ ಹಿನ್ನೆಲೆಯಲ್ಲಿ ಫಯೇಝ್ ಅಹ್ಮದ್ ಎಂಬಾತ ಮುಸ್ಲಿಮ್ ಸಮುದಾಯದ ಯುವತಿಯೊಬ್ಬಳಿಗೆ ಹಲ್ಲೆ ನಡೆಸಿದ ಘಟನೆ ಬಂಗಾಳದ ಫಲಕಟಾದ ಕೊಚ್ ವಿಹಾರದಿಂದ ವರದಿಯಾಗಿದೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಶ್ಚಿಮ ಬಂಗಾಳ ಘಟಕ ಮುಸ್ಲಿಮ್ ಯುವಕನಿಂದ ಹಿಂದೂ ಯುವತಿಗೆ ಮಾರಕಾಯುಧದಿಂದ ದಾಳಿ ಎಂದು ಬಿಂಬಿಸಿ ಕೋಮುಬಣ್ಣ ನೀಡಿ ವಿವಾದ ಸೃಷ್ಠಿಸಲು ಯತ್ನಿಸಿರುವ ಘಟನೆ ನಡೆದಿದೆ.

ಬಿಜೆಪಿ ಕಾರ್ಯಕರ್ತ ಅರುಣ್ ಪುದೂರ್ ಎಂಬಾತ ವಾಸ್ತವನ್ನು ಮರೆಮಾಚಿ ತಿರುಚಿದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಹಿಂದೂ ಯುವತಿಗೆ ಮುಸ್ಲಿಮ್ ಯುವಕನಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಎಂಬ ಪ್ರಚೋದನಾಕಾರಿ ಪೋಸ್ಟ್ ಹಂಚಿಕೊಂಡಿದ್ದರು. ಈ ನಡುವೆ ಇದರ ವಾಸ್ತವಿಕತೆಯ ಕಡೆಗೆ ಆಲ್ಟ್ ನ್ಯೂಸ್ ಬೆಳಕು ಚೆಲ್ಲಿದಾಗ ಇದೊಂದು ಪ್ರೇಮ ವೈಷಮ್ಯದ ಹಿನ್ನೆಲೆಯಲ್ಲಿ ಆಕ್ರೋಶಿತ ಯುವಕ, ತನ್ನದೇ ಸಮುದಾಯದ ಯುವತಿಗೆ ಹಲ್ಲೆ ನಡೆಸಿರುವುದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಆಲ್ಟ್ ನ್ಯೂಸ್ ನೈಜ್ಯ ಪೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ವಾಸ್ತವಿಕತೆಯನ್ನು ಬಹಿರಂಗಪಡಿಸಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಲ್ಲಿ ವಿಚಾರಿಸಿದಾಗ ಯುವತಿ ಮೇಲೆ ದಾಳಿ ನಡೆದಿರುವುದು ವಾಸ್ತವ. ಆದರೆ ಈ ದಾಳಿಗೆ ಕೋಮುಬಣ್ಣ ಹಚ್ಚಿರುವುದು ಸರಿಯಲ್ಲ. ಪ್ರೇಮ ನಿರಾಕರಣಿಸಿದ ಕಾರಣ ತನ್ನದೇ ಸಮುದಾಯದ ಯುವತಿ ಮೇಲೆ ಫಯೇಝ್ ಅಹ್ಮದ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಲಾಗಿದೆ.

Join Whatsapp