ಭಾರತೀಯ ಸೇನೆಯ 254 AA ಹೆಲಿಕಾಪ್ಟರ್ ಪತನ

Prasthutha|

ಪತಾನ್​​ಕೋಟ್, ಆ .3: ಪಂಜಾಬ್​ ರಾಜ್ಯದ ಪತಾನ್​ ಕೋಟ್ ಬಳಿ ಇರುವ ರಂಜಿತ್ ಸಾಗರ್ ಡ್ಯಾಂನಲ್ಲಿ ಭಾರತೀಯ ಸೇನೆಯ 254 ಎಎ ಹೆಲಿಕಾಪ್ಟರ್ ಪತನವಾಗಿದೆ.

- Advertisement -

ರಂಜಿತ್ ಸಾಗರ್ ಡ್ಯಾಂನ ನೀರಿನೊಳಗೆ ಇಂದು ಬೆಳಗ್ಗೆ 10.43ಕ್ಕೆ ಹೆಲಿಕಾಪ್ಟರ್ ಪತನವಾಗಿದೆ. ಈ ಬಗ್ಗೆ ಇಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಂಜಾಬ್ ​ನ ಪತಾನ್ ​ಕೋಟ್ ​ನಿಂದ 30 ಕಿ.ಮೀ. ದೂರದಲ್ಲಿ ಈ ಡ್ಯಾಂ ಇದೆ. ಸೇನಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಜಮ್ಮು ಕಾಶ್ಮೀರ ಮತ್ತು ಪಂಜಾಬ್ ರಾಜ್ಯಗಳ ಗಡಿಯಲ್ಲಿರುವ ರಂಜಿತ್ ಸಾಗರ್ ಡ್ಯಾಂ ಜಮ್ಮು ಕಾಶ್ಮೀರದ ಕಥುವಾ ಹಾಗೂ ಪಂಜಾಬ್​ ನ ಪತಾನ್​ಕೋಟ್​ ಬಳಿ ಇದೆ. ಪ್ರಾಣಾಪಾಯದ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆ ಹೆಲಿಕಾಪ್ಟರ್ ಒಳಗೆ ಎಷ್ಟು ಜನರಿದ್ದರು, ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

- Advertisement -

ಮೂಲಗಳ ಪ್ರಕಾರ ಪೈಲಟ್ ಮತ್ತು ಸಹ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎನ್​ ಡಿ ಆರ್ ​ಎಫ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

Join Whatsapp