ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ | ಪಿಎಫ್ ಐ ಕಚೇರಿಗೆ ಎನ್ ಐಎ ದಾಳಿ ನಡೆದಿಲ್ಲ : ಸ್ಪಷ್ಟನೆ

Prasthutha|

ಬೆಂಗಳೂರು : ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿ ಎನ್ ಐಎ ಅಧಿಕಾರಿಗಳು ಪಿಎಫ್ ಐ ಕಚೇರಿಗೆ ದಾಳಿ ನಡೆಸಿದ್ದಾರೆಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದುದು ಎಂದು ಪಿಎಫ್ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶಾ ಸ್ಪಷ್ಟಪಡಿಸಿದ್ದಾರೆ.

- Advertisement -

ಈ ಸಂಬಂಧ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. “ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿ ಎನ್ ಐಎ ಅಧಿಕಾರಿಗಳು ಪಿಎಫ್ ಐ ಕಚೇರಿಗೆ ದಾಳಿ ನಡೆಸಿದ್ದಾರೆಂಬ ಕೆಲವು ಮಾಧ್ಯಮಗಳ ವರದಿಯು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಇಂತಹ ಪೂರ್ವಾಗ್ರಹ ವರದಿಗಳು ಸಾರ್ವಜನಿಕರ ದಾರಿ ತಪ್ಪಿಸುವ ಪ್ರಯತ್ನವಾಗಿದೆ. ಪಿಎಫ್ ಐ ಕಚೇರಿ ಮೇಲೆ ಯಾವುದೇ ದಾಳಿ ನಡೆದಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ’’ ಎಂದು ನಾಸಿರ್ ಪಾಶಾ ಟ್ವೀಟ್ ಮಾಡಿದ್ದಾರೆ.

ಗಲಭೆಗೆ ಸಂಬಂಧಿಸಿ ತನಿಖೆ ಚುರುಕುಗೊಳಿಸಿರುವ ಎನ್ ಐಎ ಪಿಎಫ್ ಐ ಸೇರಿದಂತೆ ಸುಮಾರು 43 ಕಡೆಗಳಲ್ಲಿ ತನಿಖೆ ನಡೆಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಎನ್ ಐಎ ದಾಳಿಯ ವೇಳೆ ಕೆಲವೆಡೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ಸುಳ್ಳು ಸುದ್ದಿ ಹರಡಿದ್ದವು.

- Advertisement -

Join Whatsapp