ಮೇ 5 ರಂದು ಬಂಟ್ವಾಳದಲ್ಲಿ ಎಸ್.ಡಿ.ಪಿ.ಐ ಬೃಹತ್ ಬಹಿರಂಗ ಪ್ರಚಾರ ಸಭೆ: ರಾಷ್ಟ್ರಾಧ್ಯಕ್ಷ ಎಂ. ಕೆ . ಫೈಝಿ ಭಾಗಿ

Prasthutha|

ಬಂಟ್ವಾಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಮೇ 05, 2023ರಂದು ವಿಧಾನಸಭಾ ಚುನಾವಣಾ ನಿಮಿತ್ತ ಬೃಹತ್ ಬಹಿರಂಗ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಬಂಟ್ವಾಳ ಕ್ಷೇತ್ರಾಧ್ಯಕ್ಷ ಮೂನಿಷ್ ಆಲಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

ಈ ಬೃಹತ್ ಪ್ರಚಾರ ಸಭೆಗೆ ಎಸ್ ಡಿ ಪಿ ಐ ರಾಷ್ಟ್ರಾಧ್ಯಕ್ಷ ಎಂ. ಕೆ ಫೈಝಿ ಭಾಗಿಯಾಗಲಿದ್ದು, ಇದರ ಜೊತೆಗೆ ಇತರ ನಾಯಕರೂ ಉಪಸ್ಥಿತರಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಮೇ 05ರಂದು ಸಂಜೆ 7 ಗಂಟೆಗೆ ಬಿ.ಸಿ ರೋಡಿನ ಕೈಕಂಬ ಜಂಕ್ಷನ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಆಹ್ವಾನಿಸುತ್ತಿದ್ದೇವೆ ಎಂದು ಅವರು ಆಮಂತ್ರಿಸಿದ್ದಾರೆ.

Join Whatsapp