► ಬಂಧಿತರು ಪ್ರವೀನ್ ಜೈನ್, ಆಶೀಷ್ ಜೈನ್, ರಾಜು ಶರ್ಮಾ….
ಲಕ್ನೋ : ದೇಶಾದ್ಯಂತ ಕೋವಿಡ್ ಸೋಂಕಿನಿಂದ ಮೃತಪಟ್ಟ ಶವಗಳನ್ನು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸುವ ಪಿಎಫ್ ಐ ಸಂಘಟನೆಯ ಕಾರ್ಯಕರ್ತರ ವೈಖರಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಶವಗಳನ್ನು ಅಂತ್ಯಕ್ರಿಯೆ ನಡೆಸಿದ ಸಂದರ್ಭ ಪಿಎಫ್ಐ – ಎಸ್ಡಿಪಿಐ ಕಾರ್ಯಕರ್ತರು ಶವಗಳ ಮೇಲಿನ ಬಟ್ಟೆ ಕದಿಯುತ್ತಿದ್ದಾರೆ ಎನ್ನಲಾದ ನಕಲಿ ವೈರಲ್ ಸಂದೇಶವೊಂದನ್ನು ಕೆಲ ವಿಘ್ನ ಸಂತೋಷಿಗಳು ಜಾಲತಾಣದಲ್ಲಿ ಹರಿದಾಡಿಸಿದ್ದಾರೆ. ಆದರೆ ಈ ಸಂದೇಶ ಸತ್ಯಕ್ಕೆ ಸಂಪೂರ್ಣ ದೂರವಾಗಿದ್ದು, ಬಂಧಿತಗೊಳಗಾದ ಆರೋಪಿಗಳನ್ನು ಬಟ್ಟೆ ವ್ಯಾಪಾರಿಗಳಾದ ಪ್ರವೀಣ್ ಜೈನ್, ಆಶೀಷ್ ಜೈನ್, ರಿಷಬ್ ಜೈನ್, ರಾಜು ಶರ್ಮಾ, ಶರವನ್ ಕುಮಾರ್ ಶರ್ಮಾ, ಬಾಬುಲ್ ಎಂದು ಗುರುತಿಸಲಾಗಿದೆ.
ಪಿಎಫ್ಐ ಕಾರ್ಯಕರ್ತರು ದೇಶದ ನಾನಾ ಭಾಗಗಲ್ಲಿ ಕೋವಿಡ್ ನಿಂದ ಮೃತಪಟ್ಟ ಶವಗಳನ್ನು ಗೌರವಯುತವಾಗಿ ಆಯಾ ಧರ್ಮಗಳ ಕ್ರಮಗಳಿಗೆ ಅನುಸಾರವಾಗಿ ಅಂತ್ಯಕ್ರಿಯೆ ನಡೆಸುತ್ತಿದ್ದು, ಕೋಮು ವಿಷಕಾರುವ ಕೆಲವೊಂದು ಕಿಡಿಗೇಡಿಗಳು ಸಂಘಟನೆಯ ವಿರುದ್ಧ ಇಲ್ಲಸಲ್ಲದ ನಿರಾಧಾರ ಆರೋಪಗಳನ್ನು ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ ಎನ್ನಲಾಗಿದೆ. ನಕಲಿ ಸುದ್ದಿಗಳನ್ನೇ ಪ್ರಕಟಿಸುವ ಪೋಸ್ಟ್ ಕಾರ್ಡ್ ಇತ್ತೀಚೆಗಷ್ಟೆ ಅಂತಿಮ ಸಂಸ್ಕಾರಕ್ಕೆ ಪಿಎಫ್ಐ ಸಂಘಟನೆ ಮೂವತ್ತೈದು ಸಾವಿರದಷ್ಟು ಹಣ ಪಡೆಯತ್ತಿದೆ ಎಂದು ನಕಲಿ ಸುದ್ದಿಯನ್ನು ಹರಿಯಬಿಟ್ಟಿತ್ತು. ಈ ವಿಚಾರ ಬಹಳಷ್ಟು ಚರ್ಚೆಗೀಡಾಗಿದ್ದಲ್ಲದೇ ಕೆಲವೆಡೆ ಪ್ರಕರಣವೂ ದಾಖಲಾಗಿತ್ತು.
ಏನಿದು ಬಟ್ಟೆ ಕದಿಯುವ ಪ್ರಕರಣ ?
ಉತ್ತರಪ್ರದೇಶದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರದ ಬಳಿಕ ಬಟ್ಟೆ, ಸೀರೆಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳವುಗೈದ ಬಟ್ಟೆ ಸೀರೆಗಳನ್ನು ಶುಚಿಗೊಳಿಸಿ ಗ್ರಾಹಕರಿಗೆ ಮರು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇವರೆಲ್ಲರೂ ಬಟ್ಟೆ ವ್ಯಾಪಾರಿಗಳು ಎನ್ನಲಾಗಿದ್ದು, ಕಿಡಿಗೇಡಿಗಳು ಮಾತ್ರ ಪಿಎಫೈ ಸಂಘಟನೆಯನ್ನು ವಿನಾ ಕಾರಣ ಎಳೆದು ತಂದು ಸಂಘಟನೆಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸುತ್ತಿರುವುದು ಮಾತ್ರ ಅವರ ಮನೋಸ್ಥಿತಿಗೆ ಹಿಡಿದ ಕೈಗನ್ನಡಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.