ಬೆಂಗಳೂರು: 2023ರ ಕರ್ನಾಟಕ ವಿಧಾನಸಭೆಯ ಚುನಾವಣೆಯ ವೇಳಾಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ ವೈರಲ್ ಆಗುತ್ತಿರುವ ವೇಳಾಪಟ್ಟಿ ಅಧಿಕೃತವೇ?
ಚುನಾವಣಾ ಆಯೋಗ 2023ರ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ಪೋಸ್ಟರೊಂದನ್ನು ಹಂಚಲಾಗುತ್ತಿದೆ.
ಮಾರ್ಚ್ 27ರಿಂದ ನೀತಿ ಸಂಹಿತೆ ಜಾರಿಗೆ ಬರಲಿದ್ದು , ಏಪ್ರಿಲ್ 17ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುತ್ತದೆ, ಏಪ್ರಿಲ್ 26ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 27ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ, ಮೇ12ರಂದು ಮತದಾನ ನಡೆದು, ಮೇ 15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ವೇಳಾಪಟ್ಟಿ ಅಧಿಕೃತವೇ?
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಚುನಾವಣಾ ವೇಳಾ ಪಟ್ಟಿ ನಕಲಿಯಾಗಿದ್ದು, 2018ರ ಚುನಾವಣಾ ವೇಳಾಪಟ್ಟಿಯನ್ನೇ ಎಡಿಟ್ ಮಾಡಿ, 2018 ಇರುವ ಕಡೆ 2023 ಎಂದು ಬರೆಯಲಾಗಿದೆ. ಇದೇ ವೇಳಾಪಟ್ಟಿಯನ್ನು ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ.