ನವದೆಹಲಿ: ಬಹಿಷ್ಕೃತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಭಾರತದಲ್ಲಿ ತನ್ನ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಎದುರಿಸುತ್ತಿದ್ದೇನೆ ಎಂದಿದ್ದಾರೆ. ಜುಲೈನಲ್ಲಿ ಮುಕ್ತಾಯಗೊಂಡ ತನ್ನ ಭಾರತೀಯ ನಿವಾಸ ಪರವಾನಗಿಯನ್ನು ಸರ್ಕಾರ ಇನ್ನೂ ನವೀಕರಿಸಿಲ್ಲ ಎಂದು ಹೇಳಿದ್ದಾರೆ.
ನಾನು ಭಾರತದಲ್ಲಿ ವಾಸಿಸಲು ಇಷ್ಟಪಡುತ್ತೇನೆ, ಆದರೆ ನನ್ನ ನಿವಾಸ ಪರವಾನಗಿಯನ್ನು ಇನ್ನೂ ನವೀಕರಿಸಲಾಗಿಲ್ಲ ಎಂದು 13 ವರ್ಷಗಳಿಂದ ಭಾರತದಲ್ಲಿರುವ ನಸ್ರೀನ್ ಆಜ್‌ತಕ್ ಬಾಂಗ್ಲಾಗೆ ತಿಳಿಸಿದ್ದಾರೆ.
ತನ್ನ ನಿವಾಸ ಪರವಾನಗಿಯ ನವೀಕರಣದ ಬಗ್ಗೆ ಸರ್ಕಾರಿ ಅಧಿಕಾರಿಗಳು ಯಾವುದೇ ಉತ್ತರಗಳನ್ನು ನೀಡುತ್ತಿಲ್ಲ. ಸಹಾಯಕ್ಕಾಗಿ ಕೇಂದ್ರ ಗೃಹ ಸಚಿವಾಲಯದೊಳಗೆ ಯಾರನ್ನು ಸಂಪರ್ಕಿಸಬೇಕು ಎಂದು ಖಚಿತವಿಲ್ಲ ಎಂದಿದ್ದಾರೆ.
ಸ್ವೀಡಿಷ್ ಪೌರತ್ವವನ್ನು ಹೊಂದಿರುವ ತಸ್ಲೀಮಾ ನಸ್ರೀನ್ 2011 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ.
ನಾನು ಆನ್‌ಲೈನ್ ನಲ್ಲಿ ನನ್ನ ಸ್ಥಿತಿಯನ್ನು ಪರಿಶೀಲಿಸುತ್ತಿದ್ದೇನೆ ಆದರೆ ಇನ್ನೂ ಯಾವುದೇ ದೃಢೀಕರಣವನ್ನು ಸ್ವೀಕರಿಸಿಲ್ಲ. ಈಗಲೂ ವೆಬ್ ಸೈಟ್ ನಲ್ಲಿನ ಸ್ಥಿತಿಯು ‘ನವೀಕರಿಸುತ್ತಿದೆ’ ಎಂದು ತೋರಿಸುತ್ತದೆ. ಹೀಗೆ ಹಿಂದೆಂದೂ ನಡೆದಿಲ್ಲ ಎಂದರು.
ನನಗೆ ಬಾಂಗ್ಲಾದೇಶ ಮತ್ತು ಅದರ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದ ಅವರು, ನಾನು ಇಲ್ಲಿ ಸ್ವೀಡಿಷ್ ಪ್ರಜೆಯಾಗಿ ವಾಸಿಸುತ್ತಿದ್ದೇನೆ ಎಂದು ಹೇಳಿದರು.