ಹೆಸರು ಬದಲಾವಣೆಗೆ ಮುಂದಾದ ಫೇಸ್ ಬುಕ್

Prasthutha|

ವಾಷಿಂಗ್ಟನ್: ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಭಾರಿ ಕ್ರಾಂತಿ ನಡೆಸಿದ ಫೇಸ್ ಬುಕ್ ತನ್ನ ಅಧಿಕೃತ ಹೆಸರನ್ನು ಬದಲಿಸಲು ಯೋಜನೆ ರೂಪಿಸಿದ್ದು, ಈ ಯೋಜನೆ ಮುಂದಿನ ವಾರದಿಂದ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್ ನಲ್ಲಿ ಫೇಸ್ಬುಕ್ ಪ್ರಧಾನ ಕಾರ್ಯನಿರ್ವಾಹಣಾಧಿಕಾರಿ ಮಾರ್ಕ್ಸ್ ಝುಕರ್ ಬರ್ಗ್ ಅವರು ಅಕ್ಟೋಬರ್ 28 ರಂದು ಮಾತನಾಡಲಿದ್ದಾರೆ. ಮಾತ್ರವಲ್ಲ ಅಂದು ಫೇಸ್ಬುಕ್ ಹೆಸರು ಬದಲಾವಣೆಯ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಸಕ್ತ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಲು ಫೇಸ್ಬುಕ್ ನಿರಾಕರಿಸಿದೆ.

- Advertisement -

ಫೇಸ್ಬುಕ್ ಕಂಪೆನಿ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ನ ಪೋಷಕವಾಗಿದ್ದು, ಇದರ ಅಧೀನದಲ್ಲಿ Instagram, WhatsApp, Oculus ಮತ್ತು ಇನ್ನಿತರ ಆ್ಯಪ್ ಗಳು ರಂಗದಲ್ಲಿವೆ ಎಂದು ಮಾಧ್ಯಮಗಳು ವರದಿ ಮಾಡಿದೆ.

Join Whatsapp