ಫೇಸ್‌ ಬುಕ್‌, ಇನ್‌’ಸ್ಟಾಗ್ರಾಮ್‌’ನ ವೆರಿಫೈಡ್‌ ಖಾತೆಗಳಿಗೆ ಇನ್ನು ಮುಂದೆ ಶುಲ್ಕ ಪಾವತಿಸಬೇಕು: ಮಾರ್ಕ್ ಝುಕರ್’ಬರ್ಗ್

Prasthutha|

ಸ್ಯಾನ್ ಫ್ರಾನ್ಸಿಸ್ಕೊ: ಫೇಸ್‌ ಬುಕ್‌ ಹಾಗೂ ಇನ್‌ ಸ್ಟಾಗ್ರಾಮ್‌’ನ ವೆರಿಫೈಡ್‌ ಖಾತೆಗಳಿಗೆ ಮಾಸಿಕ ಚಂದಾದಾರಿಗೆ ಶುಲ್ಕ ವಿಧಿಸುವುದಾಗಿ ಫೇಸ್‌ ಬುಕ್‌ ಮೂಲದ ಮೆಟಾದ ಸಿಇಒ ಮಾರ್ಕ್ ಝುಕರ್’ಬರ್ಗ್ ಭಾನುವಾರ ಪ್ರಕಟಿಸಿದ್ದಾರೆ.

- Advertisement -

ಮೆಟಾ ವೆರಿಫೈಡ್ ಸೇವೆಯನ್ನು ಪ್ರಾರಂಭಿಸಲಿದ್ದು, ಖಾತೆಯನ್ನು ದೃಢೀಕರಿಸಲು ಶುಲ್ಕ ನಿಗದಿಪಡಿಸಲಾಗಿದೆ. ಇದು ತಿಂಗಳಿಗೆ $ 11.99 ರಿಂದ ಪ್ರಾರಂಭವಾಗುತ್ತದೆ ಎಂದು ಝುಕರ್ ಬರ್ಗ್ ಹೇಳಿದರು.

“ಈ ಹೊಸ ವೈಶಿಷ್ಟ್ಯವು ನಮ್ಮ ಸೇವೆಗಳಾದ್ಯಂತ ಸತ್ಯಾಸತ್ಯತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ” ಎಂದು ಝುಕರ್’ಬರ್ಗ್ ಫೇಸ್’ಬುಕ್ ಮತ್ತು ಇನ್ ಸ್ಟಾಗ್ರಾಮ್’ನಲ್ಲಿ ಮಾಡಿರುವ ಪೋಸ್ಟ್’ನಲ್ಲಿ ತಿಳಿಸಿದ್ದಾರೆ.

- Advertisement -

ವೆಬ್‌ ಬಳಕೆದಾರರಿಗೆ ಮಾಸಿಕ ಮಾಸಿಕ $ 11.99 (ಸುಮಾರು 984.49 ರೂ.) ಹಾಗೂ ಆ್ಯಪಲ್‌ ಹಾಗೂ ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಮಾಸಿಕ $ 14.99 ( ಸುಮಾರು 1240.12 ರೂ) ವಿಧಿಸುವುದಾಗಿ ಅವರು ಹೇಳಿದ್ದಾರೆ.



Join Whatsapp