ಬಳಕೆದಾರರಿಗೆ ಕೈಕೊಟ್ಟ Facebook, Instagram: ಪಾಸ್​ ವರ್ಡ್​ ಮರೆತವರ ಕಥೆ ಏನು?

Prasthutha|

- Advertisement -

ಜನಪ್ರಿಯ ಜಾಲತಾಣಗಳಾದ ಫೇಸ್​ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ.

ಇಂದು (ಮಾರ್ಚ್ 05) ರಾತ್ರಿ 9ರ ಸುಮಾರಿಗೆ ಏಕಾಏಕಿ ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ​ಇದರಿಂದ ಬಳಕೆದಾರರು ಕಂಗಲಾಗಿದ್ದಾರೆ. ಇನ್ನು ಫೇಸ್ಬುಕ್​ ಪಾಸ್​ ವರ್ಡ್​ ಮರೆತವರು ಪುನಃ ಲಾಗಿನ್ ಆಗುವುದಕ್ಕೆ ಪರದಾಡುವಂತಾಗಿದೆ.

- Advertisement -

ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಎರಡೂ ಖಾತೆಗಳು ಲಾಗ್‌ ಔಟ್‌ ಆಗಿದ್ದು, ಮತ್ತೆ ಲಾಗ್‌ ಇನ್‌ ಆಗುತ್ತಿಲ್ಲ. ಏಕಾಏಕಿ ಖಾತೆಗಳು ಲಾಗೌಟ್ ಆಗಿರುವುದು ಏಕೆ? ಎನ್ನುವುದು ಬಳಕೆದಾರರ ಪ್ರಶ್ನೆಯಾಗಿದೆ. ತನ್ನಷ್ಟಕ್ಕೆ ತಾನೇ ಲಗೌಟ್ ಆಗಿದ್ದರಿಂದ ಪಾಸ್​ವರ್ಡ್​ ಮರೆತವರು ಮತ್ತು ಬೇರೆಯವರ ಕಡೆಯಿಂದ ಫೇಸ್ಬುಕ್ ಖಾತೆ ಸೃಷ್ಟಿಸಿಕೊಂಡವರಿಗೆ ಮತ್ತೆ ಲಾಗಿನ್ ಆಗುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ. ಇದರಿಂದಾಗಿ ಸಾವಿರಾರು ಜನ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಯಾಕೆ ಈ ಸಮಸ್ಯೆ ಉಂಟಾಗಿದೆ ಎಂಬುದರ ಕುರಿತು ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.



Join Whatsapp