ಫೇಸ್’ಬುಕ್, ಇನ್ ಸ್ಟಾಗ್ರಾಮ್ 1 ಗಂಟೆ ಬಂದ್: ಝುಕರ್ ಬರ್ಗ್’ಗೆ 25 ಸಾವಿರ ಕೋಟಿ ಲಾಸ್

Prasthutha|

ಜನಪ್ರಿಯ ಜಾಲತಾಣಗಳಾದ ಮೆಟಾ ಸಂಸ್ಥೆಯ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮಂಗಳವಾರ ಒಂದು ಗಂಟೆ ಕಾಲ ಸ್ಥಗಿತದ ಬಳಿಕ ಒಂದೇ ದಿನದಲ್ಲಿ ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು 3 ಬಿಲಿಯನ್ ಡಾಲರ್ (ಸುಮಾರು 24,871 ಕೋಟಿ ರೂ.) ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

ಈ ಸ್ಥಗಿತವು ಮೆಟಾ ಷೇರುಗಳಲ್ಲಿ ಶೇಕಡಾ 1.6 ರಷ್ಟು ಕುಸಿತಕ್ಕೆ ಕಾರಣವಾಯಿತು. ಇದು ಮಾರ್ಕ್ ಝುಕರ್ ಬರ್ಗ್ ಅವರ ನಿವ್ವಳ ಮೌಲ್ಯದಲ್ಲಿ ಇಳಿಕೆಗೆ ಕಾರಣವಾಯಿತು. ವಾಲ್ ಸ್ಟ್ರೀಟ್ ನಲ್ಲಿ ರಾತ್ರಿಯ ವಹಿವಾಟು ಅವಧಿಯ ನಂತರ ಮೆಟಾ ಷೇರು ಬೆಲೆ 490.22 ಡಾಲರ್ ಆಗಿತ್ತು.

ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ ಝುಕರ್ ಬರ್ಗ್ ಅವರ ಒಟ್ಟು ಸಂಪತ್ತು ಒಂದು ದಿನದಲ್ಲಿ 2.79 ಬಿಲಿಯನ್ ಡಾಲರ್ ಇಳಿಕೆಯಾಗಿ 176 ಬಿಲಿಯನ್ ಡಾಲರ್ ಗೆ ತಲುಪಿದೆ.

Join Whatsapp