ಬೆಂಗಳೂರು: ಸಾರ್ವಜನಿಕರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನ್ಸ್ ಟೇಬಲ್’ಗಳನ್ನು ಕೆಲಸದಿಂದ ವಜಾ ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಆಡುಗೋಡಿ ಠಾಣೆ ಕಾನ್ಸ್ ಟೇಬಲ್ ಅರವಿಂದ್ ಹಾಗೂ ಮಾಳಪ್ಪ ಬಿ.ವಾಲಿಕಾರ್ ಲಂಚಕ್ಕೆ ಬೇಡಿಕೆ ಇಟ್ಟು ಸೇವೆಯಿಂದ ವಜಾಗೊಂಡವರು.
ಚೈತ್ರ ರತ್ನಾಕರ್ ಹಾಗೂ ಚೀರಾಸ್ ಎಂಬುವವರು ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಕಾನ್ಸ್ ಟೇಬಲ್’ಗಳು 50 ಸಾವಿರ ರೂ. ದಂಡ ಹಾಗೂ ಎಫ್ ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ತಮಗೆ ಪರಿಚಯದ ಟೀ ಅಂಗಡಿ ಒಂದಕ್ಕೆ ಪೋನ್ ಪೇ ಮೂಲಕ ನಾಲ್ಕು ಸಾವಿರ ರೂ.ಗಳನ್ನು ಲಂಚವಾಗಿ ವರ್ಗಾಯಿಸಿಕೊಂಡಿದ್ದರು.
ಈ ಬಗ್ಗೆ ಚೈತ್ರ ರತ್ನಾಕರ್ ಹಾಗೂ ಚೀರಾಸ್ ಟ್ವಿಟ್ಟರ್’ನಲ್ಲಿ ಡಿಜಿ ಹಾಗೂ ಐಜಿಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.