ಅಮರಾವತಿ: ಕೌಶಲ್ಯಾಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾಗಿದೆ. ನ್ಯಾಯಾಲಯ ನವೆಂಬರ್ 1ರವರೆಗೆ ವಿಸ್ತರಿಸಿ ಆದೇಶಿಸಿದೆ.
ಇಂದಿಗೆ (ಅಕ್ಟೋಬರ್ 19) ಅವರ ನ್ಯಾಯಾಂಗ ಬಂಧನ ಅವಧಿ ಕೊನೆಗೊಂಡಿತ್ತು. ಆದರೆ ಸ್ಥಳೀಯ ಎಸಿಬಿ ನ್ಯಾಯಾಲಯದ ಹೊಸ ಆದೇಶದಂತೆ ಬಂಧನದ ಅವಧಿ ಮುಂದುವರೆದಿದೆ.
ನಾಯ್ಡು ಅವರ ನ್ಯಾಯಾಂಗ ಬಂಧನದ ಅವಧಿ ಮುಗಿದ ಕಾರಣ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ವಿಜಯವಾಡ ಎಸಿಬಿ ನ್ಯಾಯಾಲಯವು ನ್ಯಾಯಾಂಗ ಬಂಧನದ ಅವಧಿಯನ್ನು ನವೆಂಬರ್ 1ರವರೆಗೆ ವಿಸ್ತರಿಸಿ ಆದೇಶಿಸಿದೆ.
ಕೌಶಲ್ಯಾಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶ ಸಿಐಡಿ ಸೆಪ್ಟೆಂಬರ್ 9ರಂದು ವಶಕ್ಕೆ ಪಡೆದಿತ್ತು.