ಮೋದಿ ಎಂಬ ಔಷಧದ ಎಕ್ಸ್ ಪೈರಿ ಡೇಟ್ ಮುಗಿದಿದೆ: ರೇವಂತ್ ರೆಡ್ಡಿ

Prasthutha|

ಬೆಂಗಳೂರು: ಮೋದಿ ಎಂಬ ಔಷಧದ ಅವಧಿ ಮುಗಿದಿದೆ. ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹೀನಾಯ ಸೋಲು ಕಾಣಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಹೇಳಿದ್ದಾರೆ.

- Advertisement -


ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ರಾಜ್ಯಕ್ಕೆ ಬಂದಿರುವ ಅವರು ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಅನೌಪಚಾರಿಕವಾಗಿ ಭಾನುವಾರ ಮಾತನಾಡಿದರು.


ಈ ಬಾರಿಯ ಚುನಾವಣೆಯಲ್ಲಿ ಮತದಾರರ ಮುಂದೆ ಹಲವು ವಿಚಾರಗಳಿವೆ. ಆದರೆ, ಇಡೀ ದೇಶದ ಜನತೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರೆಯಬೇಕೊ, ಬೇಡವೊ ಎಂಬ ಪ್ರಶ್ನೆಯನ್ನು ಮುಂದಿಟ್ಟು ಮತ ಚಲಾಯಿಸಲಿದ್ದಾರೆ ಎಂದರು.

Join Whatsapp