ನವದೆಹಲಿ : ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರ ಲೋಕಸಭಾ ಸದಸ್ಯತ್ವವನ್ನ ರದ್ದುಗೊಳಿಸಬೇಕು ಎಂದು ಸಂಸದೀಯ ನೈತಿಕ ಸಮಿತಿ 500 ಪುಟಗಳ ವರದಿ ಮೂಲಕ ಶಿಫಾರಸು ಮಾಡಿದೆ. ಮಹುವಾ ಮೊಯಿತ್ರಾ ಅವರ ಕ್ರಮವನ್ನು ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಘೋರ ಮತ್ತು ಅಪರಾಧ ಎಂದು ಕರೆದಿರುವ ಸಮಿತಿ, ಅವರ ವಿರುದ್ಧ ಕಠಿಣ ಶಿಕ್ಷೆಗೆ ಕರೆ ನೀಡಿದೆ.
500 ಪುಟಗಳ ವರದಿಯಲ್ಲಿ ಸಮಿತಿ, ಇಡೀ ವಿಷಯದ ಬಗ್ಗೆ ಕೇಂದ್ರವು ಕಾನೂನು, ತೀವ್ರ, ಸಾಂಸ್ಥಿಕ ಮತ್ತು ಕಾಲಮಿತಿಯೊಳಗೆ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿದೆ.
ಮಹುವಾ ಮೊಯಿತ್ರಾ ಮತ್ತು ಉದ್ಯಮಿ ಶ್ರೀದರ್ಶನ್ ಹಿರಾನಂದಾನಿ ನಡುವಿನ ನಗದು ವಹಿವಾಟಿನ ಮೂಲವನ್ನು ಭಾರತ ಸರ್ಕಾರ ಕಾನೂನು, ಸಾಂಸ್ಥಿಕ ಮತ್ತು ಕಾಲಮಿತಿಯೊಳಗೆ ತನಿಖೆ ನಡೆಸಬೇಕು ಎಂದೂ ಸಂಸದೀಯ ನೈತಿಕ ಸಮಿತಿ ಹೇಳಿದೆ.