ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಂಧಿಸಿದ್ದ ಎಎಪಿ ಮುಖಂಡ ಸಂಜಯ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದಿಪಾಂಕರ್ ದತ್ತ ಮತ್ತು ಪಿ.ಬಿ.ವರಾಳೆ ಅವರಿದ್ದ ಪೀಠವು ಸಂಜಯ್ ಸಿಂಗ್ಗೆ ಜಾಮೀನು ಮಂಜೂರು ಮಾಡಿತು. ಕಳೆದ ಆರು ತಿಂಗಳಿಂದ ಇವರು ಜೈಲಿನಲ್ಲಿದ್ದರು.
ಸಂಜಯ್ ಸಿಂಗ್ ಗೆ ಜಾಮೀನು ಮಂಜೂರು ಮಾಡಲು ಯಾವುದೇ ತಕರಾರು ಇಲ್ಲ ಎಂದಿದ್ದನ್ನು ಪರಿಗಣಿಸಿದ ಪೀಠ ಜಾಮೀನು ಮಂಜೂರು ಮಾಡಿದೆ.