ಅಬುಧಾಬಿ: ಯುಎಇ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ 230 ಯುದ್ಧಕೈದಿಗಳ ವಿನಿಮಯ ಪ್ರಕ್ರಿಯೆಗೆ ಆರಂಭವಾಗಿದೆ.
ಇದು ಉಕ್ರೇನ್ ರಶ್ಯದೊಳಗೆ ನುಗ್ಗಿದ ಬಳಿಕ ನಡೆಯುತ್ತಿರುವ ಮೊದಲ ಕೈದಿಗಳ ವಿನಿಮಯ ಪ್ರಕ್ರಿಯೆಯಾಗಿದೆ ಮತ್ತು ಯುಎಇ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ 7ನೇ ವಿನಿಮಯ ಪ್ರಕ್ರಿಯೆಯಾಗಿದೆ.
ಯುಎಇ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳ 1,788 ಕೈದಿಗಳು ಇದುವರೆಗೆ ಬಿಡುಗಡೆಗೊಂಡಿದ್ದು, ಈ ಯಶಸ್ವೀ ಮಧ್ಯಸ್ಥಿಕೆಯು ಯುಎಇ ಈ ಎರಡೂ ದೇಶಗಳ ಜತೆ ಹೊಂದಿರುವ ಸೌಹಾರ್ದ ಸಂಬಂಧದ ಪ್ರತಿಬಿಂಬವಾಗಿದೆ ಎಂದು ಯುಎಇ ವಿದೇಶಾಂಗ ಇಲಾಖೆ ಹೇಳಿದೆ.