ಗ್ಯಾಂಗ್ ಸ್ಟರ್‌ ಕೊಲೆಗೆ ನೆರವು ಆರೋಪ: ಮಾಜಿ ರೂಪದರ್ಶಿ ಹತ್ಯೆ

Prasthutha|

ನವದೆಹಲಿ: ಗ್ಯಾಂಗ್ ಸ್ಟರ್ ಕೊಲೆ ಪ್ರಕರಣದಲ್ಲಿ ನೆರವಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರನ್ನು ಮಂಗಳವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

- Advertisement -

ಗ್ಯಾಂಗ್ ಸ್ಟರ್‌ ಸಂದೀಪ್ ಗಡೋಲಿ ಎಂಬಾತನನ್ನು 2016ರ ಫೆ. 7ರಂದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ರೂಪದರ್ಶಿ ದಿವ್ಯಾ ಅವರನ್ನು ಪೊಲೀಸರು ಬಂಧಿಸಿದ್ದರು. ದಿವ್ಯಾ ಅವರಿಗೆ ಜೂನ್ ನಲ್ಲಿ ಜಾಮೀನು ಮಂಜೂರಾಗಿತ್ತು. ಐದು ಜನರಿದ್ದ ಗುಂಪೊಂದು ದಿವ್ಯಾ ಅವರನ್ನು ಹೋಟೆಲ್ ಒಂದಕ್ಕೆ ಕರೆದೊಯ್ದು ತಲೆಗೆ ಗುಂಡು ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp