ಖುರಾನ್ ಅಪಾರ್ಥ| ಸಿ.ಟಿ.ರವಿ ಯಾವುದಾದರೂ ಮುಸ್ಲಿಮ್ ಯುನಿವರ್ಸಿಟಿಯ ಪ್ರಾಂಶುಪಾಲ ಹುದ್ದೆಗೆ ಅರ್ಜಿ ಸಲ್ಲಿಸಲಿ: ಕೆ.ಅಶ್ರಫ್

Prasthutha|

ಮಂಗಳೂರು: ಮುಸ್ಲಿಮರ ಪವಿತ್ರ ಗ್ರಂಥವಾದ ಖುರಾನ್ ನ ಸೂಕ್ತಗಳನ್ನು ತಪ್ಪಾಗಿ ಸಂಭೋಧಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆಗೆ ಮಾಜಿ ಮೇಯರ್, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅದ್ಯಕ್ಷ ಕೆ. ಅಶ್ರಫ್ ಪ್ರತಿಕ್ರಿಯಿಸಿದ್ದು, ಸಿಟಿ ರವಿ ಧರ್ಮ ಭೋಧನೆ ಮಾಡುವ ಬದಲು ಯಾವುದಾದರೂ ಮುಸ್ಲಿಮ್ ವಿಶ್ವ ವಿದ್ಯಾಲಯದ ಪ್ರಾಂಶುಪಾಲ ಆಗಿ ಕಾರ್ಯ ನಿರ್ವಹಿಸಲಿ ಎಂದಿದ್ದಾರೆ.

- Advertisement -

ಇತ್ತೀಚೆಗೆ ಸಿ. ಟಿ.ರವಿ ಪತ್ರಿಕಾಗೋಷ್ಟಿಯೊಂದರಲ್ಲಿ ಮತೀಯ ಉದ್ವಿಗ್ನತೆ ಸೃಷ್ಟಿಸುವ ರೀತಿಯಲ್ಲಿ ಧಾರ್ಮಿಕ ಗ್ರಂಥ ಕುರಾನ್ ಸೂಕ್ತ ಗಳನ್ನು ಅಪಾರ್ಥ ವಾಗಿ ಸಂಭೋಧಿಸಿದ್ದು, ಪವಿತ್ರ ಕುರಾನ್ ಸಂಬೋಧನೆ ಮತ್ತು ಅರ್ಥೈಸುವಿಕೆ ಸಿ.ಟಿ.ರವಿ ಇಚ್ಚಿದಷ್ಟು ಸುಲಭವಲ್ಲ ಎಂದು ಅಶ್ರಫ್ ಹೇಳಿದ್ದಾರೆ.

ಕುರಾನ್ ನ ಬಗ್ಗೆ ಪೂರ್ವಗೃಹ ಪೀಡಿತ ವಾಗಿ ಪ್ರಸ್ತಾಪಿಸಿದರೆ .ಟಿ.ರವಿ ಯಂತಹ ವಿದ್ವೇ ಶಿಗಳಿಗೆ ಬೇರೇನು ಕಾಣಿಸಲು ಸಾದ್ಯ ಎಂದು ಪ್ರಶ್ನಿಸಿರುವ ಅವರು, ಕೇಶವ ಕೃಪಾ ಪ್ರೇರಿತ ಚೀಟಿಗಳನ್ನು ಮಾಧ್ಯಮದ ಮುಂದೆ ಪಠಿಸಿ ಧರ್ಮ ಭೋಧನೆ ಮಾಡುವ ಬದಲು ಸಿ.ಟಿ.ರವಿ ಯಾವುದಾದರೂ ಮುಸ್ಲಿಮ್ ವಿಶ್ವ ವಿದ್ಯಾಲಯದ ಪ್ರಾಂಶುಪಾಲ ಹುದ್ದೆಗೆ ಅರ್ಜಿ ಸಲ್ಲಿಸಲಿ ಎಂದು ಕಿಡಿಕಾರಿದ್ದಾರೆ



Join Whatsapp