ಫ್ರಾನ್ಸ್ ದಾಳಿ ಕುರಿತ ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ | ಮಲೇಷ್ಯಾ ಮಾಜಿ ಪ್ರಧಾನಿ ಮೊಹಮ್ಮದ್

Prasthutha: October 31, 2020

ಕೌಲಲಾಂಪುರ : ಫ್ರಾನ್ಸ್ ಚರ್ಚ್ ಬಳಿ ಮೂರು ಮಂದಿಯ ಸಾವಿಗೆ ಕಾರಣವಾಗಿದ್ದ, ಚೂರಿ ಇರಿತ ಪ್ರಕರಣದ ಬಳಿಕದ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಲೇಷ್ಯಾದ ಮಾಜಿ ಪ್ರಧಾನಿ ಮಹಾಥಿರ್ ಮೊಹಮ್ಮದ್ ಹೇಳಿದ್ದಾರೆ. ಅಲ್ಲದೆ, ತಮ್ಮ ಪೋಸ್ಟ್ ಗಳನ್ನು ಫೇಸ್ ಬುಕ್ ಮತ್ತು ಟ್ವಿಟರ್ ನಿಂದ ತೆಗೆದು ಹಾಕಲಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದಿನ ಹತ್ಯಾಕಾಂಡಗಳಿಗಾಗಿ ಲಕ್ಷಾಂತರ ಫ್ರೆಂಚರನ್ನು ಹತ್ಯೆ ಮಾಡುವ ಹಕ್ಕು ಮುಸ್ಲಿಮರಿಗಿದೆ ಎಂಬ ಮೊಹಮ್ಮದ್ ಅವರ ಹೇಳಿಕೆಯನ್ನು ವಿವಾದಾತ್ಮಕಗೊಳಿಸಲಾಗಿತ್ತು.

“ನಾನು ನನ್ನ ಬ್ಲಾಗ್ ನಲ್ಲಿ ಏನು ಬರೆದಿದ್ದೆನೋ, ಅದನ್ನು ತಪ್ಪಾಗಿ ಮತ್ತು ಆ ಅರ್ಥದಿಂದ ಹೊರತಾಗಿ ಬಿಂಬಿಸುವ ಪ್ರಯತ್ನಗಳು ನಡೆದಿರುವುದಕ್ಕೆ ನನಗೆ ಹೇಸಿಗೆಯಾಗುತ್ತಿದೆ’’ ಎಂದು ಮೊಹಮ್ಮದ್ ಹೇಳಿದ್ದಾರೆ. ಟೀಕಾಕಾರರು ನನ್ನ ಬ್ಲಾಗ್ ಅನ್ನು ಪೂರ್ಣವಾಗಿ ಓದಿಲ್ಲ, ಅದರಲ್ಲೂ ಮುಖ್ಯವಾಗಿ, ವಿವಾದಾತ್ಮಕಗೊಳಿಸಲಾದ ಈ ವಾಕ್ಯದ ನಂತರದ ವಾಕ್ಯಗಳನ್ನು ಸರಿಯಾಗಿ ಓದಿಲ್ಲ ಎಂದು ಮೊಹಮ್ಮದ್ ಹೇಳಿದ್ದಾರೆ.

ವಿವಾದಗೊಳಿಸಲಾದ ಹೇಳಿಕೆಯ ಮುಂದಿನ ಸಾಲುಗಳಲ್ಲಿ “ಆದರೆ ಮುಸ್ಲಿಮರು ಯಾವತ್ತೂ ಕಣ್ಣಿಗೆ, ಕಣ್ಣು ನೀತಿ ಅಳವಡಿಸಿಕೊಂಡಿಲ್ಲ. ಮುಸ್ಲಿಮರು ಅಳವಡಿಸಿಕೊಳ್ಳುವುದೂ ಇಲ್ಲ. ಫ್ರೆಂಚ್ ಕೂಡ ಅಳವಡಿಸಿಕೊಳ್ಳಕೂಡದು. ಅದಕ್ಕೆ ಬದಲಾಗಿ, ಇತರ ಜನರ ಭಾವನೆಗಳನ್ನು ಗೌರವಿಸಲು ತಮ್ಮ ಜನರಿಗೆ ಫ್ರೆಂಚ್ ಕಲಿಸಬೇಕು’’ ಎಂದು ಮೊಹಮ್ಮದ್ ಹೇಳಿದ್ದಾರೆ.

ಪ್ರವಾದಿ ಮುಹಮ್ಮದರ ಅವಮಾನಕಾರಿ ಕಾರ್ಟೂನ್ ಅನ್ನು ಬೋಧಕರೊಬ್ಬರು ತರಗತಿಯಲ್ಲಿ ಪ್ರದರ್ಶಿಸಿದುದಕ್ಕೆ ಅವರ ಶಿರಚ್ಛೇಧ ಮಾಡಿ ಹತ್ಯೆ ಮಾಡಿದ್ದ ಘಟನೆ ಫ್ರಾನ್ಸ್ ನಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್ ಮಾತನಾಡಿ, ‘ಇಸ್ಲಾಮಿಕ್ ತೀವ್ರವಾದ’ ಮಟ್ಟಹಾಕುವುದಾಗಿ ಘೋಷಿಸಿದ್ದರು. ಇದಾದ ಬಳಿಕ, ಫ್ರಾನ್ಸ್ ನಲ್ಲಿ ಮತ್ತೊಂದು ಚೂರಿ ಇರಿತ ನಡೆದಿತ್ತು.

ಘಟನೆ ನಂತರ ಮೊಹಮ್ಮದ್ ಅವರು ತಮ್ಮ ಬ್ಲಾಗ್ ನ ಭಾಗವಾಗಿ ಈ ಹೇಳಿಕೆ ದಾಖಲಿಸಿದ್ದರು. ಅದನ್ನು ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲೂ ಪ್ರಕಟಿಸಿದ್ದರು. ಬಳಿಕ ಅದನ್ನು ತೆಗೆದುಹಾಕಲಾಗಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!