‘Miss you so much’ ಸುಶಾಂತ್ ಸಿಂಗ್ ಎಂದು ವೀಡಿಯೋ ಪೋಸ್ಟ್ ಮಾಡಿದ ಮಾಜಿ ಗೆಳತಿ ರಿಯಾ ಚಕ್ರವರ್ತಿ

Prasthutha|

ಮುಂಬೈ: ನಟ ಸುಶಾಂತ್ ಸಿಂಗ್ ಅವರ 36 ನೇ ಜನ್ಮ ದಿನವಾದ ಇಂದು ಅವರ  ಮಾಜಿ ಗೆಳತಿ ರಿಯಾ ಚಕ್ರವರ್ತಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮಿಸ್ ಯು ಎಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.

- Advertisement -

ನಟ ಸುಶಾಂತ್ ಜೂನ್ 2020 ರಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಈ ದುರಂತದಿಂದ ಆಘಾತಗೊಂಡ  ಅಭಿಮಾನಿಗಳು ರಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ 2020ರಲ್ಲಿ ಮಾದಕ ವಸ್ತುಗಳನ್ನು ಖರೀದಿಸಿದ ಆರೋಪದ ಮೇಲೆ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರಾಪಿಕ್ ಸಬ್ ಸ್ಟೆನ್ಸಸ್ (ಎನ್ ಡಿಪಿಎಸ್) ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದರಿಂದ ಕೆಲವು ವಾರ ಜೈಲಿನಲ್ಲಿ ಕಳೆದಿದ್ದರು.

ರಿಯಾ ಚಕ್ರವರ್ತಿ ಕೊನೆಯ ಬಾರಿಗೆ ಬಾಲಿವುಡ್ ಚಿತ್ರ ಚೆಹ್ರೆಯಲ್ಲಿ ಕಾಣಿಸಿಕೊಂಡಿದ್ದರು.



Join Whatsapp