ಲಖನೌ: ನಮ್ಮ ಪಕ್ಷ ಉತ್ತರಪ್ರದೇಶದಲ್ಲಿ ಆಡಳಿತಕ್ಕೆ ಬಂದರೆ ಇವಿಎಂ ವ್ಯವಸ್ಥೆಯನ್ನು ರದ್ದುಗೊಳಿಸುತ್ತೇವೆ ಎಂದು ಸಮಾಜವಾದಿ ಪಕ್ಷದ ನಾಯಕ ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆರಿಕದಂಥ ದೇಶಗಳೇ ಬ್ಯಾಲೆಟ್ ಪೇಪರ್ ವ್ಯವಸ್ಥೆಯ ಮತದಾನ ಅಳವಡಿಸಿಕೊಂಡಿವೆ. ಇಲ್ಲಿಯೂ ಕೂಡ ಇವಿಎಂ ರದ್ದುಗೊಳಿಸಿ, ಬ್ಯಾಲೆಟ್ ಪೇಪರ್ ಮತದಾನ ನಡೆದರೆ ಖಂಡಿತ ಬಿಜೆಪಿ ಸೋಲುತ್ತದೆ. ನಾವು ಉತ್ತರಪ್ರದೇಶದಲ್ಲಿ ಸರ್ಕಾರ ರಚನೆ ಮಾಡಿದರೆ, ಇಲ್ಲಿ ಇವಿಎಂ ಪದ್ಧತಿಯನ್ನು ಖಂಡಿತ ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ.