ವಿಧಾನಸೌಧದ ಪ್ರತಿ ಗೋಡೆಯೂ ‘ಕಮಿಷನ್’ ಎಂದು ಕನವರಿಸುತ್ತಿದೆ: ಕಮಿಷನ್ ಸರಕಾರದ ಬಗ್ಗೆ ಕಾಂಗ್ರೆಸ್ ವ್ಯಂಗ್ಯ

Prasthutha|

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಎಲ್ಲಾ ವಿಭಾಗದಲ್ಲೂ ಕಮಿಷನ್ ಪಡೆಯುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದೆ. ಕಮಿಷನ್ ಸರಕಾರದ ಬಗ್ಗೆ ಟ್ವೀಟ್ ಮೂಲಕ ವ್ಯಂಗ್ಯವಾಡಿರುವ ರಾಜ್ಯ ಕಾಂಗ್ರೆಸ್, ವಿಧಾನಸೌಧದ ಪ್ರತಿ ಗೋಡೆಯೂ ‘ಕಮಿಷನ್’ ಎಂದು ಕನವರಿಸುತ್ತಿವೆ ಎಂದು ಕಾಳೆಲೆದಿದೆ.

- Advertisement -


PSI ಆಕಾಂಕ್ಷಿಗಳಲ್ಲೂ ಕಮಿಷನ್, ಗುತ್ತಿಗೆದಾರರಲ್ಲೂ ಕಮಿಷನ್, ಬಿಬಿಎಂಪಿಯಲ್ಲೂ ಕಮಿಷನ್, ಮಠಗಳ ಅನುದಾನದಲ್ಲೂ ಕಮಿಷನ್ ರಸ್ತೆ, ಚರಂಡಿಯಲ್ಲೂ ಕಮಿಷನ್, ಗೋಮಾತೆಯ ಮೇವಿನಲ್ಲೂ ಕಮಿಷನ್, ವಿಧಾನಸೌಧದ ಪ್ರತಿ ಗೋಡೆಯೂ ‘ಕಮಿಷನ್’ ಎಂದು ಕನವರಿಸುತ್ತಿವೆ! ಈ ಕಮಿಷನ್ ಯಾವ ಬಗೆಯಲ್ಲಿ ಕಟ್ ಮಾಡುವಿರಿ ಹಲಾಲ್ ನಿಂದಲೋ ಅಥವಾ ಜಟ್ಕಾದಿಂದಲೋ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದೆ.


PSI ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಜತೆ ಗೃಹ ಸಚಿವ !

- Advertisement -


545 ಪಿಎಸ್ ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಸಂಬಂಧಿಸದಂತೆ ಪೊಲೀಸರು ಬಿಜೆಪಿ ಪಕ್ಷದ ಪದಾಧಿಕಾರಿಯಾದ ದಿವ್ಯಾ ಹಾಗಾರಗಿ ಪತಿಯನ್ನು ಬಂದಿಸಿದ್ದರು. ಇದೀಗ ಗೃಹ ಸಚಿವ ಅರಗ ಜ್ಞಾನೆಮದ್ರ ಮತ್ತು ದಿವ್ಯಾ ಹಾಗಾರಗಿ ಒಟ್ಟಾಗಿ ನಿಮತಿರುವ ಪೋಟೋ ವೈರಲ್ ಆಗಿದೆ.

Image


PSI ಪರೀಕ್ಷೆ ಅಕ್ರಮದ ಕಿಂಗ್ ಪಿನ್, ಬಿಜೆಪಿ ಪಕ್ಷದ ಪದಾಧಿಕಾರಿಯಾದ ದಿವ್ಯಾ ಹಾಗಾರಗಿ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸುವಂತಹ ಆತ್ಮೀಯತೆ ಹೊಂದಿದ್ದಾರೆ ಈ ರಾಜ್ಯದ ಗೃಹಸಚಿವರು. ಹೀಗಾಗಿಯೇ ಈ ಅಕ್ರಮದ ಬಗ್ಗೆ ‘ರಕ್ಷಣಾತ್ಮಕ ಆಟ’ ಆಡುತ್ತಾ ಬಂದಿದ್ದರು. ಹೀಗಿರುವಾಗ ನ್ಯಾಯಯುತ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವೇ? ಪ್ರತಿ ಹಗರಣದ ಮೂಲ ಬಿಜೆಪಿ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Join Whatsapp