ಮುಸ್ಲಿಮರ ವಿರುದ್ಧ ಜನಾಂಗೀಯ ಹತ್ಯೆಗೆ ಕರೆ ನೀಡುತ್ತಿರುವ ಹಿಂದುತ್ವ ಮತಾಂಧರು !

Prasthutha|

ನವದೆಹಲಿ: ದೇಶದಲ್ಲಿ ಯಾರೂ ಅಧಿಕಾರಕ್ಕೇರಿದರೂ ಮುಸ್ಲಿಮರ ಏಳಿಗೆಯನ್ನು ಸಹಿಸುವುದಿಲ್ಲ. ಮುಸ್ಲಿಮರನ್ನು ದೇಶದಿಂದ ಬೇರು ಸಮೇತವಾಗಿ ಕಿತ್ತೆಸೆಯುತ್ತೇವೆ ಮತ್ತು ಸಮಾಧಿಯ ಹಾದಿ ತೋರಿಸುತ್ತೇವೆ . ಈ ನಿಟ್ಟಿನಲ್ಲಿ ಹಿಂದೂ ಯುವಕರನ್ನು ಜಾಗೃತಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ. ಎಪ್ರಿಲ್ 2 ರ ನಂತರ ದೇಶದ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲಾಗುವುದು. ಘರ್ ವಾಪಸಿ ಯೋಜನೆಗೆ ಒಪ್ಪದವರನ್ನು ಪಾಕಿಸ್ತಾನಕ್ಕೆ ರವಾನೆ ಮಾಡಲಾಗುವುದು ಎಂದು ಪ್ರಚೋದನಕಾರಿಯಾಗಿ ಹಿಂದೂ ರಕ್ಷಾ ದಳ ಎಂಬ ಹಿಂದುತ್ವ ಮತಾಂಧ ಸಂಘಟನೆಯ ನಾಯಕ ಪಿಂಕಿ ಚೌಧರಿ ಎಂಬಾತ ಆಗಸ್ಟ್ 8 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ತಿಳಿಸಿದ್ದಾನೆ. ಕುಖ್ಯಾತ ಹಿಂದುತ್ವ ಬೋಧಕ ಯತಿ ನರಸಿಂಹಾನಂದ್, ಅಶ್ವಿನಿ ಉಪಾಧ್ಯಾಯ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾತ್ರವಲ್ಲದೆ ಪ್ರತಿಭಟನೆಯ ನಂತರ ಪೊಲೀಸ್ ಕ್ರಮದ ಹಿನ್ನೆಲೆಯಲ್ಲಿ ಈ ನಾಯಕರು ತಲೆಮರೆಸಿಕೊಂಡಿದ್ದರು

- Advertisement -

ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸುವ ಸಲುವಾಗಿಯೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೆಹಲಿಯ ಆಸುಪಾಸಿನ 2000 ಮಂದಿ ಜಮಾವಣೆಗೊಂಡು ಬ್ರಿಟಿಷ್ ಸರ್ಕಾರ ಜಾರಿಗೆ ತಂದಿರುವ 222 ಕರಾಳ ಕಾನೂನುಗಳನ್ನು ರದ್ದುಗೊಳಿಸಿ ಸಮಾನ ನಾಗರಿಕ ಕಾನೂನನ್ನು ಜಾರಿಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು. ಮಾತ್ರವಲ್ಲದೆ ಪ್ರತಿಭಟನೆಯುದ್ದಕ್ಕೂ ಭಾಷಣಕಾರರು ಮುಸ್ಲಿಮರ ನರಮೇಧಕ್ಕೆ ಕರೆ ನೀಡುತ್ತಿರುವ ದೃಶ್ಯ ಮಾಧ್ಯಮದ ಮೂಲಕ ಬಹಿರಂಗವಾಗಿದೆ. ಪ್ರಚೋದನಕಾರಿಯಾಗಿ ಭಾಷಣಗೈದ ದೆಹಲಿ ಬಿಜೆಪಿಯ ಮಾಜಿ ನಾಯಕ ಮತ್ತು ಸುಪ್ರೀಮ್ ಕೋರ್ಟ್ ನ ವಕೀಲರಾದ ಅಶ್ವಿನಿ ಉಪಾಧ್ಯಾಯ ಮತ್ತು ಇತರ 5 ಮಂದಿ ಆರೋಪಿಗಳನ್ನು ದೆಹಲಿಯ ವಿವಿಧ ಕಡೆಗಳಿಂದ ಬಂಧಿಸಲಾಗಿತ್ತು. ಮಾತ್ರವಲ್ಲದೆ ಒಂದು ದಿನದ ಅಂತರದಲ್ಲಿ ಉಪಾಧ್ಯಾಯ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿತ್ತು. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ದೆಹಲಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣದ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರೂ ಕೂಡ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿರಲಿಲ್ಲ. ಮಾತ್ರವಲ್ಲದೆ ಅನುಮತಿ ರಹಿತವಾಗಿ ನಡೆದ ಪ್ರತಿಭಟನೆಯನ್ನು ತಡೆಗಟ್ಟಲು ಪೊಲೀಸರು ಪ್ರಯತ್ನ ನಡೆಸಿರಲಿಲ್ಲವೆಂದು ಮಾಜಿ ಪೊಲೀಸ್ ಮಹಾನಿರ್ದೆಶಕ ವಿಕ್ರಮ್ ಸಿಂಗ್ ಅವರು ಆರೋಪಿಸಿದ್ದಾರೆ.

- Advertisement -

ದೆಹಲಿ ಘಟನೆಯ 5 ದಿನಗಳ ನಂತರ ದೂರದರ್ಶನ ಟಿವಿಯಲ್ಲಿ ಪ್ರತ್ಯಕ್ಷವಾದ ಪಿಂಕಿ ಚೌಧರಿ, ಆಗಲೂ ಪ್ರಚೋದನಕಾರಿ ಹೇಳಿಕೆ ನೀಡಿ ಮುಸ್ಲಿಮರನ್ನು ನರಮೇಧಕ್ಕೆ ಮುಂದಾಗುವಂತೆ ಹಿಂದುತ್ವದ ಬೆಂಬಲಿಗರಿಗೆ ಕರೆ ನೀಡಿದ್ದ. ಇದು ಸಾಕಷ್ಟು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಮುಂದಿನ ವರ್ಷ ನಡೆಯುವ ದೆಹಲಿ ಮುನ್ಸಿಪಲ್ ಚುನಾವಣೆಯ ದೃಷ್ಟಿಯಿಂದ ಕೋಮು ದ್ರುವೀಕರಣದ ಮೂಲಕ ಅಧಿಕಾರಕ್ಕೇರಲು ಹಿಂದುತ್ವ ಬಲಪಂಥೀಯರು ಪ್ರಯತ್ನಿಸುತ್ತಿದ್ದಾರೆಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.



Join Whatsapp