BSY ವೇದಿಕೆಯಲ್ಲಿದ್ದರೂ ಮೋದಿ ಸೌಜನ್ಯಕ್ಕೂ ಅವರ ಹೆಸರು ಹೇಳಲಿಲ್ಲ, ಇಷ್ಟು ಬೇಗ BSY ಅವರು ಒಡೆದ ಮಡಕೆಯಂತಾದರೇ: ಕಾಂಗ್ರೆಸ್

Prasthutha|

- Advertisement -

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರೀಗ ಬಿಜೆಪಿಯಲ್ಲಿ ಚಲಾವಣೆ ಇಲ್ಲದ ನಾಣ್ಯ. BSY ವೇದಿಕೆಯಲ್ಲಿದ್ದರೂ ಮೋದಿಯವರು ಸೌಜನ್ಯಕ್ಕೂ ಅವರ ಹೆಸರು ಹೇಳಲಿಲ್ಲ, ಇಷ್ಟು ಬೇಗ BSYBJP ಅವರು ಒಡೆದ ಮಡಕೆಯಂತಾದರೇ ಬಿಜೆಪಿಯವರಿಗೆ? ಅಡ್ವಾಣಿಯನ್ನೇ ಮುಕ್ತ ಮಾಡಿರುವಾಗ #BSYmuktaBJP ಮಾಡುವುದು ಮೋದಿಯವರಿಗೆ ಯಾವ ಲೆಕ್ಕ! ಉಂಡ ಮನೆಯ ಗಳ ಹಿರಿಯುವುದು ಬಿಜೆಪಿ ಹುಟ್ಟುಗುಣ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಪ್ರಧಾನಿ ಮೋದಿ ಭೇಟಿಯ ಬಳಿಕ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ಬೆಂಗಳೂರ್ – ಮೈಸೂರ್ ರೈಲನ್ನು ಭಾಷಣದಲ್ಲಿ ಅದ್ಭುತವಾಗಿ ಬಿಟ್ಟಿದ್ದ ನರೇಂದ್ರ ಮೋದಿ ಅವರೇ, ಮೈಸೂರು ಪ್ಯಾರಿಸ್ ಆಗ್ಲಿಲ್ಲ. ಸಬ್ ಅರ್ಬನ್ ರೈಲು ನಿಗದಿತ ಅವಧಿ ಮುಗಿಯುತ್ತಾ ಬಂದರೂ ಓಡಲಿಲ್ಲ. ಮೈಸೂರು ಹೆದ್ದಾರಿಯು ಜಲಮಾರ್ಗವಾಗಿದೆ! ರಸ್ತೆ ಗುಂಡಿಗಳು ಪ್ರಾಣ ತೆಗೆಯುತ್ತಿವೆ. ಇದಕ್ಕೆ #NimHatraIdyaUttara ? #ModiMosa ಎಂದು ಟೀಕಿಸಿದೆ.

- Advertisement -

ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ, ದಕ್ಷಿಣ ಕನ್ನಡದ ಸಂಸದ, ಹೀಗಿದ್ದೂ ವೇದಿಕೆಯಲ್ಲಿ ಪ್ರಧಾನಿ ಕಟೀಲ್ ರ ಹೆಸರು ಹೇಳದಿರುವುದು ಏಕೆ? ಕಾರ್ಯಕರ್ತರು ಕಾರು ಅಲ್ಲಾಡಿಸಿದ ಪರಿಣಾಮವೇ? ನಳಿನ್ ವಿರೋಧಿ ಬಣದ ಅಭಿಯಾನಕ್ಕೆ ಸಿಕ್ಕ ಯಶಸ್ಸೇ? ಸಂಸತ್ ಅಭ್ಯರ್ಥಿ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯ ಸೂಚನೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.



Join Whatsapp