ಮುನ್ಸಿಪಾಲಿಟಿ ಅಧ್ಯಕ್ಷನೂ ಇಷ್ಟು ಕೀಳುಮಟ್ಟಕ್ಕೆ‌ ಇಳಿದು ಹೇಳಿಕೆ ನೀಡುವುದಿಲ್ಲ: ಎಚ್‌ಕೆ ಪಾಟೀಲ

Prasthutha|

ಹುಬ್ಬಳ್ಳಿ: ಕೀಳುಮಟ್ಟದ ಹೇಳಿಕೆ‌ ನೀಡಿ‌ ಸಮಾಜದಲ್ಲಿ ದ್ವೇಷ ಹರಡುವ ಕೆಲಸ‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಹೇಳಿದ ಸಚಿವ ಎಚ್.ಕೆ. ಪಾಟೀಲ, ಚುನಾವಣಾ ಆಯೋಗವು ಅವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸದೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಮೋದಿ ಅವರು ದ್ವೇಷದ ಮಾತುಗಳನ್ನಾಡಿದ್ದಾರೆ. ಒಬ್ಬ ಮುನ್ಸಿಪಾಲಿಟಿ ಅಧ್ಯಕ್ಷನೂ ಅವರಷ್ಟು ಕೀಳುಮಟ್ಟಕ್ಕೆ‌ ಇಳಿದು ಹೇಳಿಕೆ ನೀಡುವುದಿಲ್ಲ. ಈ ಚುನಾವಣೆಯಲ್ಲಿ ಅವರು ಅಭ್ಯರ್ಥಿಯಾಗಿ ಉಳಿಯಲು ಅರ್ಹರಲ್ಲ ಎಂದು ಹೇಳಿದ್ದಾರೆ.



Join Whatsapp