ಬೆಂಗಳೂರು: ಆಫ್ರಿಕಾದ ಅತಿ ದೊಡ್ಡ ವೈಮಾನಿಕ ಸಂಸ್ಥೆ ಮತ್ತು ಆಫ್ರಿಕಾದ ವಿಮಾನಯಾನ ಸೇವೆಯಾದ ಇಥಿಯೋಪಿಯನ್ ಏರ್ ಲೈನ್ಸ್ ಇದೀಗ ಭಾರತದ ಬೆಂಗಳೂರು – ಇಥಿಯೋಪಿಯಾ ನಡುವೆ ವಿಮಾನ ಸೇವೆಯನ್ನು ಪುನರಾರಂಭಿಸಿದೆ. 2022 ರ ಮಾರ್ಚ್ 27 ರಿಂದ ವಾರದಲ್ಲಿ ಮೂರು ದಿನ ವಿಮಾನ ಸೇವೆಯನ್ನು ವೈಭವದಿಂದ ಆರಂಭಿಸಿದೆ.
ಕೋವಿಡ್ ಸಾಂಕ್ರಾಮಿಕ ಆರಂಭವಾದ ಎರಡು ವರ್ಷಗಳ ನಂತರ ವಿಮಾನ ಸೇವೆ ಪುನರಾರಂಭವಾಗಿದೆ. 2019 ರ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಬೆಂಗಳೂರಿನಿಂದ ಇಥಿಯೋಪಿಯಾಗೆ ವಿಮಾನ ಸೇವೆ ಆರಂಭವಾಗಿತ್ತು. ಬೆಂಗಳೂರು ಮತ್ತು ಅಡ್ಡಿಸ್ ಅಬಡ ನಡುವೆ ಬಿ738 ವಿಮಾನದ ಮೂಲಕ ನಿಗದಿತ ವೇಳಾಪಟ್ಟಿಯಂತೆ ತಡೆರಹಿತ ಸೇವೆ ನೀಡಲಾಗುತ್ತಿತ್ತು.
ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ದಂದು ಇಥಿಯೋಪಿಯಾದಿಂದ ರಾತ್ರಿ 11 ಗಂಟೆಗೆ ಹೊರಡಲಿರುವ ವಿಮಾನ ಬೆಳಿಗ್ಗೆ 7.10 ಕ್ಕೆ ಬೆಂಗಳೂರಿಗೆ ಬರಲಿದೆ, ಮಂಗಳವಾರ, ಗುರುವಾರ ಮತ್ತು ಶನಿವಾರ 2.30 ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನ 5.50 ಕ್ಕೆ ಇಥಿಯೋಪಿಯಾಗೆ ತೆರಳಲಿದೆ.
ವಿಮಾನ ಸೇವೆ ಪುನರಾರಂಭ ಕುರಿತು ಮಾಹಿತಿ ನೀಡಿದ ಇಥಿಯೋಪಿಯಾ ವಿಮಾನ ಗುಂಪಿನ ಸಿಇಒ ಮೆಸ್ಪಿನ್ ತಾಸೆವ್, “ಭಾರತದ ವಾಣಿಜ್ಯ ರಾಜಧಾನಿಗೆ ವಿಮಾನ ಪುನರಾರಂಭಿಸಿರುವುದು ತಮಗೆ ಸಂತಸವಾಗಿದೆ. ನಮ್ಮ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಲು ನಾವು ಬದ್ಧವಾಗಿದ್ದೇವೆ. ಭಾರತ – ಆಫ್ರಿಕಾ ಮತ್ತು ಅದರಾಚೆಗೆ ಸಂಪರ್ಕ ಸಾಧಿಸುವಲ್ಲಿ ಇಥಿಯೋಪಿಯಾ ವಿಮಾನ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಐಸಿಟಿ ಕೇಂದ್ರವಾಗಿರುವ ಬೆಂಗಳೂರು, ರಾಜಧಾನಿ ನವದೆಹಲಿ ಮತ್ತು ಮುಂಬೈಗೆ ಹೆಚ್ಚುವರಿಯಾಗಿ ನಿರಂತರವಾಗಿ ಸೇವೆ ಒದಗಿಸುತ್ತಿದೆ. ಈ ವಿಮಾನಗಳು ಅಸ್ತಿತ್ವದಲ್ಲಿರುವ ಸರಕು ಸಾಗಾಣೆ ಮತ್ತು ಪ್ರಯಾಣಿಕ ವಿಮಾನ ಸೇವೆಗಳು ಭಾರತದ ಇತರ ಸ್ಥಳಗಳಿಗೆ ಪೂರಕವಾಗಿವೆ. “ ಭಾರತ ಮತ್ತು ಆಫ್ರಿಕಾ ನಡುವೆ ವೇಗವಾಗಿ ಬೆಳೆಯುತ್ತಿರುವ ವಿಮಾನ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಬೆಂಗಳೂರು ನಗರವನ್ನು ಸೇರಿಸುವುದು ಅತ್ಯಂತ ಅಗತ್ಯವಾಗಿದೆ. ಭಾರತದ ಉಪಖಂಡದಲ್ಲಿ ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ ವಲಯಕ್ಕೆ ಈ ಸೇವೆ ಅನುಕೂಲವಾಗಲಿದೆ. ಬೆಂಗಳೂರು – ಅಡಿಸ್ ಅಬಾಬದ ನಡುವಿನ ವಿಮಾನ ಸೇವೆಯಿಂದ ದಕ್ಷಿಣ ಭಾರತದ ಬೆಂಗಳೂರು ಮತ್ತು ಆಫ್ರಿಕಾದ 60ಕ್ಕೂ ಹೆಚ್ಚು ಸ್ಥಳಗಳ ನಡುವೆ ವೇಗವಾಗಿ ಸಂಪರ್ಕ ಒದಗಿಸುತ್ತದೆ. ಪ್ರಸ್ತುತ ಇಥಿಯೋಪಿಯನ್, ಮುಂಬೈ ಮತ್ತು ದೆಹಲಿಗೆ ಪ್ರಯಾಣಿಕ ವಿಮಾನಗಳು ಮತ್ತು ಬೆಂಗಳೂರು,, ಚೆನ್ನೈ, ಮುಂಬೈ ಮತ್ತು ದೆಹಲಿಗೆ ಸರಕು ಸೇವೆಯನ್ನು ಇಥಿಯೋಪಿಯನ್ ವಿಮಾನ ಸಂಸ್ಥೆ ನಿರ್ವಹಿಸುತ್ತದೆ ಎಂದು ಹೇಳಿದರು.
ಇಥಿಯೋಪಿಯಾದ ವಿಮಾನ ಅತ್ಯಂತ ತ್ವರಿತವಾಗಿ ವಿಮಾನ ಸೇವೆ ಒದಗಿಸುವ ಸಂಸ್ಥೆಯಾಗಿದ್ದು, 75 ವರ್ಷಗಳಿಂದ ವಿಮಾನಯಾನ ವಲಯದಲ್ಲಿ ಸೇವೆ ಸಲ್ಲಿಸುತ್ತಿದೆ. 130ಕ್ಕೂ ಹೆಚ್ಚು ರಾಷ್ಟ್ರಗಳಿಗೆ ನಾಗರಿಕ ಮತ್ತು ಸರಕು ಸೇವೆಯನ್ನು ಒದಗಿಸುತ್ತಿದೆ.
ಇಥಿಯೋಪಿಯ ವೀಸಾ ಪಡೆಯಲು www.evisa.gov.etಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.