ಮತ್ತೆ ಆರಂಭವಾದ ಆದಿವಾಸಿಗಳ ಪ್ರತಿಭಟನೆ; ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶಗೊಂಡ ಆದಿವಾಸಿಗಳು

Prasthutha|

ಕೊಡಗು:  ಜಿಲ್ಲೆಯಲ್ಲಿ ಮತ್ತೆ ಆದಿವಾಸಿಗಳ ಪತ್ರಿಭಟನೆ ಆರಂಭವಾಗಿದ್ದು, ನಮಗೆ ನೀಡಿದ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂದು  ಧರಣಿ ಕುಳಿತಿರುವ ಘಟನೆ ಕೊಡಗಿನ ಬಾಳಲೆಗೆ ಗ್ರಾಮ ಪಂಚಾಯಿತಿಯ ರಾಜಪುರ ಸಮೀಪದ ಅಡುಗುಂಡಿ ಅರಣ್ಯ ಗೇಟ್ ಬಳಿ  ನಡೆದಿದೆ.

- Advertisement -

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಮಾಸ್ತಿಗುಡಿಯಲ್ಲಿ ಕಲ್ಪಿಸಲಾಗಿದ್ದ ಪುನರ್ವಸತಿ ಕೇಂದ್ರವನ್ನು ತೊರೆದ ಆದಿವಾಸಿಗಳು ಮತ್ತೆ ಕೊಡಗು ಜಿಲ್ಲೆಯಲ್ಲಿನ ತಮ್ಮ ಮೂಲಸ್ಥಳಕ್ಕೆ ಆಗಮಿಸಿ ಪ್ರತಿಭಟನೆ  ನಡೆಸಿ ಅರಣ್ಯ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅಡುಗುಂಡಿಯಲ್ಲಿ ವಾಸವಿದ್ದ ನೂರಾರು ಆದಿವಾಸಿ ಕುಟುಂಬಗಳನ್ನು ಮನವೊಲಿಸುವ ಮೂಲಕ ಅರಣ್ಯ ಪ್ರದೇಶದಿಂದ ಮೈಸೂರು ಜಿಲ್ಲೆಯ ಕಸಬಾ ಹೋಬಳಿಯ ರಾಜೇಗೌಡನ ಹುಂಡಿ ಗ್ರಾಮದ ಸರ್ವೇ ನಂ. 37ರ ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಪ್ರತಿಕುಟುಂಬಕ್ಕೆ 15 ಲಕ್ಷ ರೂ. ಪ್ಯಾಕೇಜಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂಬ ಸರ್ಕಾರದ ಭರವಸೆಯನ್ನು ನಂಬಿದ ಆದಿವಾಸಿಗಳು ಕಾಡು ತೊರೆದಿದ್ದರು.

- Advertisement -

ಕಾಡಿನಲ್ಲಿ ನೆಮ್ಮದಿಯಾಗಿದ್ದ ನಮ್ಮನ್ನು ಪುನರ್ ವಸತಿ ಕೇಂದ್ರಕ್ಕೆ ಕರೆದೊಯ್ಯುವಾಗ ನೀಡಿದ ಭರವಸೆಗಳು ಈಡೇರಿಲ್ಲ ಎಂದು ಆರೋಪಿಸಿ  ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಆದಿವಾಸಿಗಳು, ಮತ್ತೆ ತಮ್ಮ ತವರಿಗೆ ಮರಳಲು ಯತ್ನಿಸಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ಮಾಸ್ತಿಗುಡಿ ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದ ನೂರಾರು ಜೇಬುಕುರುಬ ಹಾಗೂ ಯರವ ಸಮುದಾಯದ ಆದಿವಾಸಿ ಕುಟುಂಬಗಳು ಪುನರ್ ವಸತಿ ಕೇಂದ್ರದಲ್ಲಿನ ಅವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ.

Join Whatsapp