ಈಶ್ವರಪ್ಪರನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸಿ: ಜೆಡಿಎಸ್ ಮುಖಂಡ ಆಗ್ರಹ

Prasthutha|

ಮಂಗಳೂರು: ಇತ್ತೀಚೆಗೆ ಮಂಗಳೂರಿನ ಕಾವೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಸ್ಲಿಮರ ಆಝಾನ್ ಮತ್ತು ಆರಾಧನ ವಿಚಾರದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ತಕ್ಷಣ ಅಮಾನತುಗೊಳಿಸಬೇಕೆಂದು ಯುವ ಜೆಡಿಎಸ್ ದ.ಕ. ಜಿಲ್ಲಾ ಕಾರ್ಯದರ್ಶಿ ಸವಾಝ್ ಬಂಟ್ವಾಳ್ ಆಗ್ರಹಿಸಿದ್ದಾರೆ.

- Advertisement -


ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಬಿಜೆಪಿಯಲ್ಲೊಬ್ಬ ಭ್ರಷ್ಟ, ಕಳ್ಳ, ಸುಳ್ಳ, ಬಚ್ಚಲು ಬಾಯಿಯ ಜೊತೆ ಅಜ್ಞಾನಿಯೂ ಆಗಿರುವ ಈಶ್ವರಪ್ಪ ಅವರು ಮತ್ತೊಮ್ಮೆ ತನ್ನ ನಾಲಗೆಯನ್ನು ಹರಿಯಬಿಟ್ಟಿದ್ದು, ಇನ್ನೊಂದು ಧರ್ಮದ ನಂಬಿಕೆಗೆ ವಿರುದ್ಧ ಮಾತನಾಡಿದ್ದಾರೆ. ಇದು ಅಕ್ಷಮ್ಯವಾಗಿದ್ದು, ಇಂತಹವರನ್ನು ಬಿಜೆಪಿಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.


ಈತ 40% ಕಮಿಷನ್ ಪಡೆದು ತನ್ನ ಸ್ಥಾನ ಮತ್ತು ಮಾನ ಎರಡನ್ನೂ ಕಳೆದುಕೊಂಡಿದ್ದು, ಇದೀಗ ಕೋಮು ಸೂಕ್ಷ್ಮ ಪ್ರದೇಶ ಮಂಗಳೂರಿಗೆ ಬಂದು ಬೊಬ್ಬಿರಿಯುತ್ತಿದ್ದಾರೆ. ಶಿವಮೊಗ್ಗ ಘರ್ಷಣೆಗೆ ನೇರ ಹೊಣೆಯಾದ ಈಶ್ವರಪ್ಪ ಸದ್ಯ ಶಾಂತವಾಗಿರುವ ಮಂಗಳೂರಿನಲ್ಲಿ ಮತ್ತೆ ಕೋಮು ಘರ್ಷಣೆಗೆ ಕರೆ ನೀಡಿದಂತಿದೆ ಎಂದು ಸವಾಝ್ ಆರೋಪಿಸಿದ್ದಾರೆ.



Join Whatsapp