ಯಾರೇ ಸಹಿ ಸಂಗ್ರಹ ಮಾಡಿದರೂ ಪ್ರಯೋಜನವಿಲ್ಲ, ಅದಕ್ಕೆಲ್ಲ ನಾನು ಬಗ್ಗುವುದಿಲ್ಲ: ಈಶ್ವರಪ್ಪ

Prasthutha|

ಶಿವಮೊಗ್ಗ: ತಮ್ಮ ವಿರುದ್ಧ ಯಾರೇ ಸಹಿ ಸಂಗ್ರಹ ಮಾಡಿದರೂ ಬಗ್ಗುವುದಿಲ್ಲ. ರಾಜೀನಾಮೆ, ಖಾತೆ ಬದಲಾವಣೆಗೆ ಜಗ್ಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆಯಾಗಿದೆ. ತಮ್ಮ ನಿಲುವು ಸ್ಪಷ್ಟಪಡಿಸಿದ್ದೇನೆ. ಪಕ್ಷದ ವರಿಷ್ಠರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಗೊಂದಲಕ್ಕೆ ತೆರೆ ಎಳೆಯಲು ಸೂಚಿಸಿದ್ದಾರೆ. ಈ ಕುರಿತು ಬಹಿರಂಗವಾಗಿ ಯಾರೂ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ. ಈಗ ಎಲ್ಲವೂ ಮುಗಿದುಹೋಗಿರುವ ಕಥೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳಿಗೆ ಸಂಘಟಿತ ಬಿಜೆಪಿ ಎದುರಿಸಲು ಯಾವುದೇ ಅಸ್ತ್ರಗಳಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿವೆ. ಬೇರೇನು ವಿಷಯಗಳು ಇ್ಲಲದ ಕಾರಣ ರಾಜ್ಯಪಾಲರಿಗೆ ಬರೆದ ಪತ್ರ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ನಮ್ಮ ಮಧ್ಯೆ ಇರುವುದು ಸಣ್ಣಪುಟ್ಟ ಆಡಳಿತಾತ್ಮಕ ವಿಚಾರಗಳಲ್ಲಿನ ವ್ಯತ್ಯಾಸ. ಅವರು ಏನೇ ಮಾತನಾಡಿದರೂ ಉಪ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರಲ್ಲದೆ ಬಿಜೆಪುಯೊಳಗಿರುವ ಭಿನ್ನಮತ ಸ್ಪೋಟವನ್ನು ವಿರೋಧ ಪಕ್ಷದ ಮೇಲೆ ಹಾಕಿದ್ದಾರೆ.

- Advertisement -