ಮಡಿಕೇರಿ: ಸಚಿವ ಈಶ್ವರಪ್ಪ ತಮ್ಮ ಟಿಕೆಟ್ ತ್ಯಜಿಸಿ ಮೃತಪಟ್ಟ ಹರ್ಷನ ತಂಗಿಗೆ ಎಂಎಲ್ ಎ ಟಿಕೆಟ್ ನೀಡಲಿ. ಹಾಗೆಯೇ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಸಹ ಎಂಪಿ ಸ್ಥಾನ ತ್ಯಜಿಸಿ ಹರ್ಷ ಅವರ ತಾಯಿಗೆ ಎಂಪಿ ಸ್ಥಾನಕ್ಕೆ ಟಿಕೆಟ್ ಕೊಡಲಿ ಎಂದು ಎಂಎಲ್ ಸಿ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಈ ಬಗ್ಗೆ ಮಡಿಕೇರಿ ಸಮೀಪದ ಸುಂಟಿಕೊಪ್ಪದಲ್ಲಿ ಮಾತನಾಡಿದ ಅವರು, ಸಚಿವರಾಗಿರುವ ಸ್ಥಳೀಯ ಶಾಸಕ ಕೆ ಎಸ್ ಈಶ್ವರಪ್ಪ ತಮ್ಮ ಟಿಕೆಟ್ ತ್ಯಜಿಸಿ ಮೃತಪಟ್ಟ ಹರ್ಷನ ತಂಗಿಗೆ ಎಂಎಲ್ ಎ ಟಿಕೆಟ್ ನೀಡಲಿ. ತಂಗಿಗೆ ಟಿಕೆಟ್ ನೀಡಿದರೆ ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅವಿರೋಧವಾಗಿ ಆಕೆಯನ್ನು ವಿಧಾನ ಸಭೆಗೆ ಕಳುಹಿಸುತ್ತೇವೆ. ಹಾಗೆಯೇ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಗ ಬಿ.ವೈ ರಾಘವೇಂದ್ರ ಸಹ ಎಂಪಿ ಸ್ಥಾನ ತ್ಯಜಿಸಲಿ. ಹರ್ಷ ಅವರ ತಾಯಿಗೆ ಎಂಪಿ ಸ್ಥಾನಕ್ಕೆ ಟಿಕೆಟ್ ಕೊಡಲಿ. ಇದರಿಂದ ಹಿಂದೂ ಸಂಸ್ಕೃತಿಗೆ ನಿಜವಾದ ಗೌರವ ಸಿಕ್ಕಂತಾಗುತ್ತದೆ ಎಂದು ಸಿ ಎಂ ಇಬ್ರಾಹಿಂ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.