ಆಪರೇಷನ್ ಕಮಲ ಮೂಲಕ ಸಿಎಂ ಆಗುವ ಕನಸು ಕಂಡ ಈಶ್ವರಪ್ಪ: ಕಾಂಗ್ರೆಸ್ ವ್ಯಂಗ್ಯ

Prasthutha|

ಬೆಂಗಳೂರು: ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರನ್ನು ಬಿಜೆಪಿಗೆ ಕರೆತರಲು ಹಣದ ಆಮಿಷ ಮುಂದಿಟ್ಟುರುವುದನ್ನು ಕೆ.ಎಸ್ ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.

- Advertisement -

ಸಂಗಮೇಶ್ ಅವರನ್ನು ಬಿಜೆಪಿಗೆ ಕರೆತರಲು ಈಶ್ವರಪ್ಪನವರು 50 ಕೋಟಿ ನೀಡುವ ಆಮಿಷ ಇಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಡಿ.ಕೆ ಶಿವಕುಮಾರ್ ಅವರಿಗೆ ತಮ್ಮ ಪಕ್ಷದ ಶಾಸಕರ ಬೆಲೆ ಗೊತ್ತಿಲ್ಲ. ನಾನು 500 ಕೋಟಿ ಎಂದು ಹೇಳಿದ್ದೆ. ಆದರೆ ಇವರು ಯಾಕೆ ಸಂಗಮೇಶ್ ಅವರು ಇಷ್ಟು ಕೆಳಮಟ್ಟಕ್ಕಿಳಿಸುತ್ತಾರೆ ಎಂದು ಹೇಳಿದರು.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಈಶ್ವರಪ್ಪನವರು ಗಂಭೀರ ಆರೋಪವನ್ನು ನಿರಾಕರಿಸದೆ ಶಾಸಕ ಸಂಗಮೇಶ್ ಅವರಿಗೆ 500 ಕೋಟಿ ಆಮಿಷ ಒಡ್ಡಿದ್ದೆ ಎಂದು ಒಪ್ಪಿದ್ದಾರೆ. ನೋಟ್ ಎಣಿಸುವ ಮೆಷಿನ್ ಇಟ್ಟಿರುವ
ಅವರು 40% ಕಮಿಷನ್ ಹಣದಲ್ಲಿ 500 ಕೋಟಿ ನೀಡಲು ಮುಂದಾಗಿದ್ರಾ? ಆಪರೇಷನ್ ಕಮಲ ಮಾಡಿಯಾದ್ರೂ ಸಿಎಂ ಆಗೋಣ ಎಂಬ ಕನಸು ಕಂಡಿದ್ರಾ? ಹೀಗಾಗಿಯೇ ರಾಜೀನಾಮೆ ನೀಡುವಂತಾಯಿತೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.

Join Whatsapp