ಸಾಲುಮರದ ತಿಮ್ಮಕ್ಕಗೆ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಕೆ: ಸಿಎಂ ಆದೇಶ

Prasthutha|

ಬೆಂಗಳೂರು: ನಾಡೋಜ ಸಾಲು ಮರದ ತಿಮ್ಮಕ್ಕ ಅವರಿಗೆ ಈ ಹಿಂದೆ ನೀಡಲಾಗಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮುಂದುವರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

- Advertisement -

ನಾಡೋಜ ಸಾಲುಮರದ ತಿಮ್ಮಕ್ಕಗೆ ಸಂಪುಟ ದರ್ಜೆಯ ಸ್ಥಾನಮಾನವನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳು ಇಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಂಪುಟ ದರ್ಜೆ ಸಚಿವರಿಗೆ ಸಿಗುವ ಎಲ್ಲ ಸವಲತ್ತುಗಳು ತಿಮ್ಮಕ್ಕಗೆ ಸಿಗಲಿದ್ದು, ವೇತನ ಮತ್ತು ಭತ್ಯೆ, ವಸತಿಗೃಹ, ಕಾರಿನಂತಹ ಸೌಲಭ್ಯಗಳು ಮುಂದುವರಿಯಲಿವೆ.

2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ಸಾಲುಮರದ ತಿಮ್ಮಕ್ಕ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡುವುದರ ಜತೆಗೆ ಪರಿಸರ ರಾಯಭಾರಿ ಗೌರವವನ್ನು ನೀಡಿತ್ತು. ಇದನ್ನು ಮುಂದುವರೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

- Advertisement -

ಪರಿಸರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಾಲುಮರದ ತಿಮ್ಮಕ್ಕ ಒಬ್ಬ ಪರಿಸರವಾದಿಯಾಗಿದ್ದು, ಸಾವಿರಾರು ಮರಗಳನ್ನು ನೆಟ್ಟು ವೃಕ್ಷಮಾತೆ ಎನಿಸಿಕೊಂಡಿದ್ದಾರೆ. ಅಲ್ಲದೇ ಇವರ ಕಾರ್ಯಕ್ಕಾಗಿ ಪದ್ಮಶ್ರೀ, ನಾಡೋಜ ಸೇರಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿ ಸಂದಿವೆ.



Join Whatsapp