ಇನ್ಫಿ ಮೂರ್ತಿ ಅಳಿಯನಿಗೆ ಒಲಿಯುತ್ತಾ ಪ್ರಧಾನಿ ಪಟ್ಟ?
ಇಂಗ್ಲೆಂಡ್: ಅಧಿಕಾರ ಸ್ವೀಕರಿಸಿದ 45 ದಿನಗಳಲ್ಲೇ ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಝ್ ಟ್ರಸ್ ಅವರು ದಿಢೀರ್ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇದರೊಂದಿಗೆ ಮುಂದಿನ ಪ್ರಧಾನಿ ಹುದ್ದೆಯನ್ನು ಇನ್ಫೋಸಿಸಿ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಅಲಂಕರಿಸುವ ಸಾಧ್ಯತೆ ದಟ್ಟವಾಗುತ್ತಿದ್ದೆ.
ತನ್ನ ಆರ್ಥಿಕ ನೀತಿಯು ಇಂಗ್ಲೆಂಡ್ ಮಾರುಕಟ್ಟೆ ಆಘಾತ ನೀಡಿದ್ದರಿಂದ ಆಡಳಿತರೂಢ ಕಾನ್ಸರ್ವೇಟಿವ್ ಪಕ್ಷದಲ್ಲಿ ಭಿನ್ನತೆ ಉಂಟಾದ ಕಾರಣ ಚುನಾಯಿತರಾದ ಆರು ವಾರಗಳಲ್ಲೇ ತನ್ನ ಹುದ್ದೆಯನ್ನು ತೊರೆಯುವುದಾಗಿ ಲಿಝ್ ಟ್ರಸ್ ಸುದ್ದಿಗಾರರಿಗೆ ತಿಳಿಸಿದರು.
ಆರು ವಾರಗಳ ಹಿಂದೆ ರಿಷಿ ಸುನಕ್ ಅವರನ್ನು ಸೋಲಿಸಿ ಲಿಝ್ ಟ್ರಸ್ ಅವರು ಬ್ರಿಟನ್ ಪ್ರಧಾನ ಮಂತ್ರಿಯಾಗಿದ್ದರು. ತಾನು ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಟ್ರಸ್ ತಿಳಿಸಿದ್ದಾರೆ.
ಬ್ರಿಟಿಷ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಪ್ರಧಾನ ಮಂತ್ರಿಯಾಗಿರುವ ಟ್ರಸ್ ಅವರ ಸ್ಥಾನಕ್ಕೆ ಮುಂದಿನ ವಾರದೊಳಗೆ ನಾಯಕತ್ವದ ಚುನಾವಣೆ ಪೂರ್ಣಗೊಳ್ಳಲಿದೆ.