ಕ್ರಿಕೆಟ್ ಗೆ ವಿದಾಯ ಘೋಷಿಸಿದ ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್

Prasthutha|

ಲಂಡನ್: ಇಂಗ್ಲೆಂಡ್ ನ ಏಕದಿನ ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್, ಎಲ್ಲ ಮಾದರಿಯ ಕ್ರಿಕೆಟ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.

- Advertisement -


126 ಏಕದಿನ ಮತ್ತು 72 ಟಿ20 ಪಂದ್ಯಗಳಲ್ಲಿ ಮಾರ್ಗನ್, ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು. ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್, 2019ರ ಏಕದಿನ ವಿಶ್ವಕಪ್ ಜಯಿಸಿದ್ದು, ಮತ್ತು ಕಪ್ತಾನರಾಗಿ ಎರಡು ಮಾದರಿಗಳಲ್ಲಾಗಿ 118 ಗೆಲುವು ಸಾಧಿಸಿರುವುದು ಕೂಡಾ ಮಾರ್ಗನ್ ದಾಖಲೆಯಾಗಿದೆ.


ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಇಯಾನ್ ಮಾರ್ಗನ್, ಎಲ್ಲ ಕ್ರೀಡಾಪಟುಗಳಂತೆ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ. ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ಕ್ರಿಕೆಟ್ ಬಿಟ್ಟು ಹೋಗಲು ಇದು ಸೂಕ್ತ ಸಮಯವಾಗಿದೆ. ಪತ್ನಿ, ಕುಟುಂಬ, ಸ್ನೇಹಿತರು, ಕೋಚ್, ಸಹ ಆಟಗಾರರು, ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ನನ್ನ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Join Whatsapp