ಇಂಗ್ಲೆಂಡ್‌ ಕ್ರಿಕೆಟ್ ಸ್ಟಾರ್‌ ಆಟಗಾರ ಮೊಯಿನ್‌ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ವಿದಾಯ

Prasthutha|

ಲಂಡನ್:‌ ಇಂಗ್ಲೆಂಡ್‌ ಕ್ರಿಕೆಟ್ ತಂಡದ ಸ್ಟಾರ್‌ ಆಲ್‌ ರೌಂಡರ್‌ ಮೊಯಿನ್‌ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ವಿದಾಯ ಹೇಳಿದ್ದಾರೆ.

- Advertisement -

ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ ಕ್ರಿಕೆಟ್‌ ಸರಣಿಗೆ ತಮ್ಮನ್ನು ಕೈಬಿಟ್ಟ ಬಳಿಕ ಅವರ ಈ ನಿರ್ಧಾರ ಹೊರಬಂದಿದೆ. ಇಂಗ್ಲೆಂಡ್ ಪರ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯಲು ಮತ್ತು ಯುವಕರು ಇಂಗ್ಲೆಂಡ್ ಕ್ರಿಕೆಟ್‌ನ ಹಿಡಿತವನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು 37 ವರ್ಷದ ಮೊಯಿನ್‌ ಅಲಿ ಹೇಳಿದ್ದಾರೆ.

ಐಸಿಸಿ ಪುರುಷರ ಟಿ20 ವಿಶ್ವಕಪ್‌ ನ ಜೂನ್ 27 ರಂದು ಗಯಾನಾದಲ್ಲಿ ನಡೆದ ಭಾರತದ ವಿರುದ್ಧದ ಸೆಮಿಫೈನಲ್‌‌ನಲ್ಲಿ ಅಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

- Advertisement -

2014ರಲ್ಲಿ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ಮೊಯಿನ್ ಪಾದಾರ್ಪಣೆ ಮಾಡಿದ್ದರು.



Join Whatsapp