ಎಡ್ಜ್ಬಾಸ್ಟನ್ ಟೆಸ್ಜ್: ಇಂಗ್ಲೆಂಡ್ ಗೆ ಸುಲಭ ಸವಾಲಾದ ಬುಮ್ರಾ ಬಳಗ: ಸರಣಿ ಸಮಬಲ

Prasthutha|

ಸಿಡ್ನಿ: ಟೀಮ್ ಇಂಡಿಯಾ ವಿರುದ್ಧ ಎಡ್ಜ್ಬಾಸ್ಟನ್ ನಲ್ಲಿ ನಡೆದ ಮಹತ್ವದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಸಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿ ಗೆಲ್ಲಲು 378 ರನ್ ಗಳ ಗುರಿ ಪಡೆದಿದ್ದ ಇಂಗ್ಲೆಂಡ್, 76.4 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿದೆ.

- Advertisement -

ಟೆಸ್ಟ್ ಪಂದ್ಯದ ಕೊನೆಯ ದಿನವಾದ ಮಂಗಳವಾರ ಇಂಗ್ಲೆಂಡ್ ಗೆಲುವಿಗೆ ಕೇವಲ 119 ರನ್ ಗಳ ಅಗತ್ಯವಿತ್ತು. ಕೊನೆಯ ದಿನ ಭಾರತದ ಬೌಲರ್ ಗಳು ʻಮ್ಯಾಜಿಕ್ʼ ಮಾಡುವರು ಎಂಬ ದೂರದ ನಿರೀಕ್ಷೆ ಇತ್ತಾದರೂ ಒಂದೇ ಒಂದು ವಿಕೆಟ್ ಪಡೆಯಲು ಭಾರತೀಯರಿಗೆ ಸಾಧ್ಯವಾಗಲಿಲ್ಲ. ಜಾನಿ ಬೆಸ್ಟೋ (114 ರನ್) ಮತ್ತು ನಾಯಕ ಬೆನ್ ಸ್ಟೋಕ್ಸ್ (142 ರನ್ ) ಗಳಿಸಿದ ಅಮೋಘ ಶತಕಗಳ ನೆರವಿನಿಂದ ಇಂಗ್ಲೆಂಡ್, ಭಾರತಕ್ಕೆ ಸರಣಿ ಗೆಲುವನ್ನು ನಿರಾಕರಿಸಿತು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್ ತಂಡ ಬೆನ್ನತ್ತಿದ ಅತಿಹೆಚ್ಚಿನ ಮೊತ್ತ (378) ಇದಾಗಿದೆ. ಇದಕ್ಕೂ ಮೊದಲು 2019ರಲ್ಲಿ ನಡೆದ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 359 ರನ್ ಗಳ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದ್ದು ಆಂಗ್ಲನ್ನರ ದಾಖಲೆಯಾಗಿತ್ತು. ಈ ಗೆಲುವಿನೊಂದಿಗೆ ಐದು ಪಂದ್ಯ ಟೆಸ್ಟ್ ಸರಣಿ 2-2 ಅಂತರದಲ್ಲಿ ಸಮಬಲದಲ್ಲಿ ಸಮಾಪ್ತಿಯಾಗಿದೆ.

Join Whatsapp