ಇಂಧನ ಕೊರತೆ: ಎರಡು ದಿನ ಸಾರ್ವಜನಿಕ ರಜೆ ಘೋಷಿಸಿದ ನೇಪಾಳ ಸರ್ಕಾರ

Prasthutha|

ಕಠ್ಮಂಡು: ಶ್ರೀಲಂಕಾದ ನಂತರ ನೇಪಾಳ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇಂಧನ ಕೊರತೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ತೀವ್ರ ಏರಿಕೆಯಿಂದಾಗಿ ನೇಪಾಳ ಸರ್ಕಾರವು ದೇಶದಲ್ಲಿ ಎರಡು ದಿನಗಳ ಸಾರ್ವಜನಿಕ ರಜೆಯನ್ನು ಘೋಷಿಸಲು ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಎಪ್ರಿಲ್ ತಿಂಗಳಲ್ಲಿ ಸಾರ್ವಜನಿಕ ವಲಯದ ಕಚೇರಿಗಳಿಗೆ ಎರಡು ದಿನಗಳ ರಜೆ ಘೋಷಿಸಲು ಸರ್ಕಾರ ಮುಂದಾಗಿದೆ.ಈ ಕ್ರಮವು ಇಂಧನದ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ನೇಪಾಳ ಸೆಂಟ್ರಲ್ ಬ್ಯಾಂಕ್ ಮತ್ತು ನೇಪಾಳ ತೈಲ ನಿಗಮದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಯಾಬಿನೆಟ್ ಮೂಲಗಳು ತಿಳಿಸಿವೆ.

ದೇಶವು ವಿದೇಶಿ ವಿನಿಮಯದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣದಿಂದಾಗಿ, ನೇಪಾಳವು ಈಗ ಶ್ರೀಲಂಕಾದ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

- Advertisement -

ಕೋವಿಡ್ ಅವಧಿಯಲ್ಲಿ ದೇಶದ ಪ್ರವಾಸೋದ್ಯಮ ವಲಯವು ಪ್ರಮುಖ ಬಿಕ್ಕಟ್ಟನ್ನು ಎದುರಿಸಿರುವುದು  ವಿದೇಶಿ ಕರೆನ್ಸಿಯ ಕೊರತೆಗೆ ಕಾರಣವಾಗಿದೆ.ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ, ವಿದೇಶಗಳಲ್ಲಿರುವ ನೇಪಾಳಿ ಪ್ರಜೆಗಳು ಡಾಲರ್ ಖಾತೆಗಳನ್ನು ತೆರೆಯಲು ಮತ್ತು ಬ್ಯಾಂಕುಗಳಲ್ಲಿ ಠೇವಣಿ ಇಡುವಂತೆ ಸರ್ಕಾರ ಒತ್ತಾಯಿಸಿದೆ.

ಭಾರತದ ನೆರೆಯ ಶ್ರೀಲಂಕಾ ಕೂಡ ಕಳೆದ ಕೆಲವು ತಿಂಗಳುಗಳಿಂದ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಧನ ಕೊರತೆಗಳ ಹೊರತಾಗಿ, ಹೆಚ್ಚುತ್ತಿರುವ ಆಹಾರ ಬೆಲೆಗಳು ಮತ್ತು ವಿದೇಶಿ ಕರೆನ್ಸಿ ಸ್ಟಾಕ್ ಗಳಲ್ಲಿನ ತೀವ್ರ ಕುಸಿತವು ಸಹ ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆಗೆ ಕಾರಣವಾಗಿತ್ತು. ಜನರ ಮತ್ತು ವಿರೋಧಪಕ್ಷಗಳ ಪ್ರತಿಭಟನೆಯಿಂದಾಗಿ ದೇಶದ ಸಚಿವ ಸಂಪುಟವು ರಾಜೀನಾಮೆ ನೀಡಿತ್ತು.



Join Whatsapp