ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರ ಪರಿಶೀಲನೆ

Prasthutha|

ಮಂಗಳೂರು: ಕಡಬ ತಾಲೂಕು ಕೊಯಿಲ ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷ ಡಾ. ಯೋಗೇಶ್ ದುಬೆ ಅವರು ಆ.10ರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

- Advertisement -

 ಜಿಲ್ಲೆಯಲ್ಲಿರುವ ಎಂಡೋ ಬಾಧಿತರ ಅಂಕಿ ಅಂಶ, ಸಂತ್ರಸ್ಥರಿಗೆ ನೀಡಲಾಗುವ ಸೌಲಭ್ಯದ ಬಗ್ಗೆ ಪುತ್ತೂರು ತಾಲೂಕು ಅರೋಗ್ಯಾಧಿಕಾರಿ ಡಾ. ದೀಪಕ್ ರೈ, ಜಿಲ್ಲಾ ಮೆಡಿಕಲ್ ಅಫೀಸರ್ ಡಾ. ನವೀನ್ ಕುಲಾಲ್ ಮಾಹಿತಿ ನೀಡಿದರು.

ಪುನರ್ವಸತಿ ಕೇಂದ್ರವನ್ನು ಮುನ್ನಡೆಸುತ್ತಿರುವ ಬೆಳ್ತಂಗಡಿ ನರಿಯ ಸಿಯೋನ್ ಆಶ್ರಮ ಟ್ರಸ್ಟ್ ನ ವ್ಯವಸ್ಥಾಪಕ ಜಾಕ್ಸನ್ ಪುನರ್ವಸತಿ ಕೇಂದ್ರದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.

- Advertisement -

ಈ ಸಂದರ್ಭ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ ಗೋಪಾಲಕೃಷ್ಣ, ಪುತ್ತೂರು ತಾಲೂಕು ಪಂಚಾಯತ್‍ನ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಎಂಡೋಸಲ್ಫಾನ್ ಜಿಲ್ಲಾ ಕೋಅರ್ಡಿನೇಟರ್ ಸಾಜುದ್ದಿನ್, ಕೊೈಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ. ಪ್ರಯಾಗ್, ಬಿಆರ್‍ಸಿ ಗಳಾದ ತನುಜ, ಸೀತಮ್ಮ, ಪುನರ್ವಸತಿ ಕೇಂದ್ರ ಸಿಬ್ಬಂದಿಗಳಾದ ರಜಿನ್, ಸಮಿತಾ, ಶೈನಿ, ಯಶ್ವಿತಾ ಮೊದಲಾದವರು ಇದ್ದರು

Join Whatsapp